ಉಡುಪಿ: ಸಮಾಜ ಸೇವೆಯಲ್ಲಿ ಛಾಯಾಗ್ರಹಣ ಪ್ರಮುಖ ಪಾತ್ರ ವಹಿಸುತ್ತದೆ, ಸಮಾಜದ ಸೇವೆಗಾಗಿ ನಡೆಯುವ ಕಾರ್ಯಕ್ರಮಗಳನ್ನು ದಾಖಲು ಮಾಡುವುದು ತುಂಬಾ ಮುಖ್ಯ ಎಂದು ರೋಟರಿ ಕ್ಲಬ್ 3182 ಜಿಲ್ಲಾ ಗವರ್ನರ್ ಜಯ ಗೌರಿ ಹಡಿಗಾಲ್ ಅಭಿಪ್ರಾಯಪಟ್ಟರು.
ಅವರು ಮಣಿಪಾಲದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ ಹಾಗೂ ರೋಟರಿ ಕ್ಲಬ್ ಮಣಿಪಾಲದ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಛಾಯಾಗ್ರಾಹಕಿಯಾರಾದ ವಿದ್ಯಾ ಪಿ. ಹೆಬ್ಬಾರ್, ಪೂರ್ಣಿಮಾ ಪ್ರಕಾಶ್ ಶೆಟ್ಟಿ, ವಿಮಲಾ ಕಲ್ಮಾಡಿ ಹಾಗೂ ಕ್ರೀಡಾ ಸಾಧಕಿ ಸಾನಿಕ ಬಂಗೇರ ಮತ್ತು ದ್ವಿಚಕ್ರ ವಾಹನದಲ್ಲಿ ದೇಶ ಪರ್ಯಟನೆ ಮಾಡಿದ ಸಾಕ್ಷಿ ಹೆಗಡೆಯವರನ್ನು ಗೌರವಿಸಿ ಅಭಿನಂದಿಸಲಾಯಿತು.
ರಾಜವರ್ಮ ಅರಿಗ, ಪ್ರವೀಣ್ ಕೊರೆಯ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷೆ ರೇಣು ಜಯರಾಮ ಸ್ವಾಗತಿಸಿದರು. ಎಸ್ ಕೆ ಪಿ ಎ ಉಡುಪಿ ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಪ್ರಸ್ತಾವಿಸಿದರು. ಪೂರ್ಣಿಮಾ ಜನಾರ್ದನ್, ಹಾಗೂ ಸಿ.ಪ್ರದೀಪ್ ಭಟ್ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ನಿಯೋಜಿತ ಅಧ್ಯಕ್ಷ ಶ್ರೀಪತಿ ಮಣಿಪಾಲ್ ನಿರೂಪಿಸಿದರು.