ದೇಶದ ಆರ್ಥಿಕ ಅಭಿವೃದ್ದಿಯಲ್ಲಿ ಸಹಕಾರಿಗಳ ಪಾತ್ರವೂ ಬಹು ಮುಖ್ಯ: ಯಶ್ ಪಾಲ್ ಸುವರ್ಣ

ಉಡುಪಿ: ದೇಶದ ಆರ್ಥಿಕತೆ ಅಭಿವೃದ್ಧಿ ಹೊಂದಲು ಸಹಕಾರಿ ಕೇತ್ರ ಕೂಡಾ ಒಂದು ಶಕ್ತಿಯಾಗಿದೆ. ಸಹಕಾರಿ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಾಗಿವೆ. ಬ್ಯಾಂಕಿಂಗ್ ಕ್ಷೇತ್ರ‌ ಇಂದು ದೊಡ್ಡ ಶಕ್ತಿಯಾಗಿ ಬೆಳೆದಿದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ. ಎಲ್ ಐ ಸಿ ಎಂಪ್ಲಾಯಿಸ್ ಕೋ – ಆಪರೇಟಿವ್ ಬ್ಯಾಂಕ್‌ ನಿ. ಟೀಚರ್ ಕೋ -ಆಪರೇಟಿವ್ ಬ್ಯಾಂಕ್ ನಿ. ಸಹಕಾರ ಇಲಾಖೆ ಉಡುಪಿ ಜಿಲ್ಲೆ ಇದರ ಜಂಟಿ ಆಶ್ರಯದಲ್ಲಿ ಉಡುಪಿಯ ಲಿಕೋ ಬ್ಯಾಂಕ್ ಸಭಾಂಗಣದಲ್ಲಿ ನಡೆದ‌ 70 ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ ಬೆಂಗಳೂರು ಇದರ ನಿರ್ದೇಶಕ ಬಿ. ಜಯಕರ ಶೆಟ್ಟಿ ಇಂದ್ರಾಳಿ‌ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಹಲವು ಬದಲಾವಣೆಗಳನ್ನು ತಂದಿದ್ದು, ಸಹಕಾರ ಕ್ಷೇತ್ರ ಅಭಿವೃದ್ದಿಯನ್ನು ನಿಶ್ಚಿತ ಪಡಿಸಿದರು. ಶೇ 42% ಯುವ ಜನತೆ ಸಹಕಾರಿ ಬ್ಯಾಂಕಿಂಗ್ ನೆಚ್ಚಿಕೊಂಡು ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿರುವಂತೆ ಮುಂದೆ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರಕ್ಕೂ ವಿಧಾನಸಭೆಯಲ್ಲಿ1 ನೇ ಸ್ಥಾನ ನೀಡುವಂತೆ ಸರಕಾರಕ್ಕೆ ಮಾನವಿ ಮಾಡಿದರು. ಸಮಾರಂಭದಲ್ಲಿ ಸಹಕಾರಿ ಬ್ಯಾಕಿಂಗ್ ಕ್ಷೇತ್ರ ದಲ್ಲಿ ಸಾಧನೆಗೈದ ಸಹಕಾರಿ‌ ಬ್ಯಾಂಕ್ ಗಳ‌ ಅಧ್ಯಕ್ಷರನ್ನು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯನ್ನು ಗೌರವಿಸಲಾಯಿತು.

ಧವಳಾ ಕಾಲೇಜು ಉಪನ್ಯಾಸಕ ಸಂತೋಷ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಎಲ್ ಐ ಸಿ ಎಂಪ್ಲಾಯಿಸ್ ಕೋ – ಆಪರೇಟಿವ್ ಬ್ಯಾಂಕ ಅಧ್ಯಕ್ಷ ಕೆ. ಕೃಷ್ಣ, ಟೀಚರ್ ಕೋ -ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್, ಎಸ್ .ವಿ ಜಿಲ್ಲಾ‌ ಸಹಕಾರಿ ‌ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ಟೀಚರ್ಸ್ ಕೋ. ಆಪರೇಟಿವ್ ಬ್ಯಾಂಕ್ ಉಪಾದ್ಯಕ್ಷ‌ ವಿಶ್ವನಾಥ ಶೆಟ್ಟಿ , ಲಿಕೋ ಬ್ಯಾಂಕ್ ಉಪಾಧ್ಯಕ್ಷ ದಯಾನಂದ ಎ ಟೀಚರ್ಸ್ ಕೋ . ಆಪರೇಟಿವ್ ಬ್ಯಾಂಕ್ ಸಿ.ಇ.ಒ ಮಂಜುನಾಥ್ ಶೆಟ್ಟಿ , ಸಹಕಾರಿ ಯೂನಿಯನ್ ನಿರ್ದೇಶಕ ಅಲೆವೂರು ಹರೀಶ್ ಕಿಣಿ, ಶಂಕರ ಪೂಜಾರಿ ಕಟಪಾಡಿ, ಮನೋಜ್ ಕರ್ಕೇರ, ಹಾಗೂ ಉಭಯ ಸಹಕಾರಿ ಬ್ಯಾಂಕ್ ಗಳ ನಿರ್ದೇಶಕ ಮಂಡಳಿ ಸದಸ್ಯರು, ನೂರಾರು ಸಹಕಾರಿಗಳು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಶ್ರೀಧರ್ ಪಿ.ಎಸ್‌ ಸ್ವಾಗತಿಸಿದರು. ಸುಧಾಕರ ಶೆಟ್ಟಿ ನಿರೂಪಿಸಿದರು. ಲಿಕೋ ಬ್ಯಾಂಕ್ ಸಿ.ಇ.ಒ ಶಶಿಕಲಾ ವಂದಿಸಿದರು.