ಡಿ.18 ರಂದು ದ ರಾಯೋ ಮಾಬೆನ್ ಡಿಸೈನರ್ ಸ್ಟುಡಿಯೋ ಉದ್ಘಾಟನೆ

ಉಡುಪಿ: ಉಡುಪಿ ಮಣಿಪಾಲದ ಜನರಿಗಾಗಿ ಲಕ್ಷ್ಮೀಂದ್ರನಗರದ ಪ್ರೀಮಿಯರ್ ಅಪ್ ಟೌನ್ ನಲ್ಲಿ ದ ರಾಯೋ ಮಾಬೆನ್ ಡಿಸೈನರ್ ಸ್ಟುಡಿಯೋ ಇದರ ಉದ್ಘಾಟನೆಯು ಡಿ.೧೮ ಭಾನುವಾರದಂದು ಬೆಳಿಗ್ಗೆ 11.30 ಕ್ಕೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸೆಲೆಬ್ರಿಟಿ ಫೋಟೋಗ್ರಾಫರ್ ಮತ್ತು ನಿರ್ದೇಶಕ ಸುಬಿ ಸ್ಯಾಮ್ಯುಯೆಲ್, ಯೋಗ ಶಿಕ್ಷಕಿ ಸಂಧ್ಯಾ ಕಾಮತ್ ಮತ್ತು ಬೆಲ್ ಒ ಸೀಲ್ ವಾಲ್ವ್ಸ್ ನಿರ್ದೇಶಕಿ ಸಪ್ನಾ ಸಾಲಿನ್ಸ್ ಭಾಗವಹಿಸಲಿದ್ದಾರೆ.

ಡಿಸೈನರ್ ಸ್ಟುಡಿಯೋದಲ್ಲಿ ಹೊಚ್ಚ ಹೊಸ ವಿನ್ಯಾಸದ ವಸ್ತ್ರಗಳು, ಮದುವೆ, ಸಮಾರಂಭಗಳಿಗೆ ಬೇಕಾದ ಗೌನ್ ಗಳು, ಬಟ್ಟೆ ಬರೆಗಳು ಹಾಗೂ ಒಟ್ಟಾರೆಯಾಗಿ ಫ್ಯಾಷನ್ ಗೆ ಸಂಬಂಧಪಟ್ಟ ಎಲ್ಲಾ ರೀತಿಯ ಉಡುಗೆಗಳು ಇಲ್ಲಿ ದೊರೆಯಲಿದೆ ಎಂದು ತನುಜಾ ಮಾಬೆನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.