ಮಣಿಪಾಲ: ದ ರಾಯೋ ಮಾಬೆನ್ ಡಿಸೈನರ್ ಸ್ಟುಡಿಯೋ ಉದ್ಘಾಟನೆ

ಮಣಿಪಾಲ: ಉಡುಪಿ-ಮಣಿಪಾಲದ ಜನರಿಗಾಗಿ ಲಕ್ಷ್ಮೀಂದ್ರನಗರದ ಪ್ರೀಮಿಯರ್ ಅಪ್ ಟೌನ್ ನಲ್ಲಿ ದ ರಾಯೋ ಮಾಬೆನ್ ಡಿಸೈನರ್ ಸ್ಟುಡಿಯೋ ಇದರ ಉದ್ಘಾಟನೆಯು ಡಿ.18 ಭಾನುವಾರದಂದು ನಡೆಯಿತು.

ಸ್ಟುಡಿಯೋವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಮ್ಮ ಊರಿನ ಹುಡುಗಿಯೊಬ್ಬಳು ಇಷ್ಟು ಉತ್ತಮ ಸಾಧನೆ ಮಾಡಿರುವುದನ್ನು ನೋಡಿದಾಗ ನನಗೆ ಹೆಮ್ಮೆ ಎನಿಸಿತು. ಆಕೆ ತಾನೇ ಖುದ್ದು ವಿನ್ಯಾಸ ಮಾಡಿರುವ ವಸ್ತ್ರಗಳನ್ನು ನೋಡಲು ಸಂತೋಷವಾಯಿತು. ಆಕೆಯ ಪ್ರತಿಭೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಉಡುಪಿಯ ಜನತೆ ಗುಣಮಟ್ಟದ ವಸ್ತುಗಳನ್ನು ಖರೀದಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ರಿಯಾ ಅವರು ಜನರಿಗೆ ಒಳ್ಳೆಯ ಸೇವೆ ನೀಡಿ, ತಮ್ಮ ಈ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು.

ಸೆಲೆಬ್ರಿಟಿ ಫೋಟೋಗ್ರಾಫರ್ ಮತ್ತು ನಿರ್ದೇಶಕ ಸುಬಿ ಸ್ಯಾಮ್ಯುಯೆಲ್, ಮತ್ತು ಬೆಲ್ ಒ ಸೀಲ್ ವಾಲ್ವ್ಸ್ ನಿರ್ದೇಶಕಿ ಸಪ್ನಾ ಸಾಲಿನ್ಸ್ ಮಾತನಾಡಿ ಶುಭಹಾರೈಸಿದರು.

ಜಾಕಿ ಮಾಬೆನ್ ಮತ್ತು ತನುಜಾ ಮಾಬೆನ್ ಉಪಸ್ಥಿತರಿದ್ದರು.