ಸಖತ್ ಸದ್ದು ಮಾಡ್ತಿದೆ “ದಿ ರಾಜಾಸಾಬ್” ಟ್ರೈಲರ್: ಪ್ರಭಾಸ್ ಅಭಿಮಾನಿಗಳು ಫುಲ್ ಖುಷ್

ರೆಬೆಲ್ ಸ್ಟಾರ್ ಪ್ರಭಾಸ್ ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಹಾರರ್-ಫ್ಯಾಂಟಸಿ ಡ್ರಾಮಾ “ದಿ ರಾಜಾಸಾಬ್” ಸಿನಿಮಾ ಮೇಲೆ ಎಲ್ಲರ ಕಣ್ಣಿದೆ. ನಿರೀಕ್ಷೆಯೂ ದುಪ್ಪಟ್ಟಾಗಿದೆ. ಕಳೆದ ವರ್ಷ, ಚಿತ್ರತಂಡವು ಪ್ಯಾನ್-ಇಂಡಿಯಾ ಝಲಕ್ ಮೂಲಕ ಕುತೂಹಲ ಕೆರಳಿಸಿತ್ತು. ಇದೀಗ ಇದೇ ರಾಜಾಸಾಬ್ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

ಮಾರುತಿ ನಿರ್ದೇಶನದ ಬಹುನಿರೀಕ್ಷಿತ ‘ದಿ ರಾಜಾಸಾಬ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗುವ ಮೂಲಕ ಅಭಿಮಾನಿಗಳಿಗೆ ಹಬ್ಬದ ಉಡುಗೊರೆ ನೀಡಿದೆ.

ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯ ಈ ಮಹೋನ್ನತ ಪ್ರಾಜೆಕ್ಟ್‌ಗೆ ಟಿ.ಜಿ. ವಿಶ್ವ ಪ್ರಸಾದ್ ಬಂಡವಾಳ ಹೂಡುತ್ತಿದ್ದಾರೆ. ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಸಿನಿಮಾ ಐದು ಭಾಷೆಗಳಲ್ಲಿ ಸಿದ್ಧವಾಗಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತಮನ್ ಎಸ್ ಅವರ ಸಂಗೀತ ಮತ್ತು ಮೈನವಿರೇಳಿಸುವ ದೃಶ್ಯಗಳು ಈ ಸಿನಿಮಾದ ಹೈಲೈಟ್ಸ್ ಆಗಿದೆ.

ಈ ಭರಪೂರ ಮನರಂಜನೆಯ ಪ್ಯಾನ್-ಇಂಡಿಯಾ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ವರ್ಚಸ್ಸು ಸಂಪೂರ್ಣ ಬದಲಾಗಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್, ಜರೀನಾ ವಹಾಬ್, ಬೋಮನ್ ಇರಾನಿ, ನಿಧಿ ಅಗರವಾಲ್, ಮಾಳವಿಕಾ ಮೋಹನನ್ ಮತ್ತು ರಿದ್ಧಿ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟಿ.ಜಿ. ವಿಶ್ವ ಪ್ರಸಾದ್ ಮತ್ತು ಕೃತಿ ಪ್ರಸಾದ್ ಅವರು ಪೀಪಲ್ ಮೀಡಿಯಾ ಫ್ಯಾಕ್ಟರಿ ಅಡಿಯಲ್ಲಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.