ಹಿರಿಯಡಕ: ಇಲ್ಲಿನ ಬೊಮ್ಮರಬೆಟ್ಟು ಗ್ರಾಮದ ಪುತ್ತಿಗೆ ಎಂಬಲ್ಲಿ ಬೃಹದಾಕಾರದ ಹೆಬ್ಬಾವೊಂದು ಪತ್ತೆಯಾಗಿದ್ದು, ಅದನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.
ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಪುತ್ತಿಗೆಯ ಶಶಾಂಕ್ ಅಮೀನ್ ಎಂಬವರ ಮನೆಯಲ್ಲಿರುವ ಕೋಳಿ ಗೂಡಿಗೆ ಬೃಹದಾಕಾರದ ಹೆಬ್ಬಾವೊಂದು ನುಗ್ಗಿತ್ತು. ಗೂಡಿನಲ್ಲಿದ್ದ ಎರಡು ಕೋಳಿಗಳ ಪೈಕಿ ಒಂದು ಕೋಳಿ ತಪ್ಪಿಸಿಕೊಂಡಿದ್ದು, ಹುಂಜ ಕೋಳಿಯೊಂದನ್ನು ಹಾವು ಸುತ್ತುಹಾಕಿ ಕೊಂದು ಹಾಕಿದೆ.
ಬಳಿಕ ಕಾಜಾರಗುತ್ತುವಿನ ದ್ವಿತೇಶ್ ಕಾಮತ್ ಅವರು ಸ್ಥಳಕ್ಕೆ ಬಂದು ಸ್ಥಳೀಯರ ಸಹಕಾರದೊಂದಿಗೆ ಹೆಬ್ಬಾವನ್ನು ಸೆರೆಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.