ಆಗಸ್ಟ್ 1 ರಿಂದ ನಂದಿನ ಹಾಲಿನ ದರ 3 ರೂ ನಷ್ಟು ಹೆಚ್ಚಳ: ಕೆಎಂಎಫ್ ಪ್ರಸ್ತಾವನೆ

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಆಗಸ್ಟ್ 1 ರಿಂದ ರಾಜ್ಯಾದ್ಯಂತ ನಂದಿನಿ ಹಾಲಿನ ದರವನ್ನು 3 ರೂ ನಷ್ಟು ಹೆಚ್ಚಿಸಲು ಮುಂದಾಗಿದೆ. ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕಳುಹಿಸಲಾಗಿದೆ ಮತ್ತು ಸಂಪುಟ ಅನುಮೋದನೆ ನಂತರ ಕರ್ನಾಟಕ ಸರ್ಕಾರವು ನಿರ್ಧಾರವನ್ನು ಪ್ರಕಟಿಸಲಿದೆ.

ಶುಕ್ರವಾರ ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಕರ್ನಾಟಕ ಸಹಕಾರ ಸಚಿವ ಕೆ ರಂಜಣ್ಣ, ಹಾಲಿನ ಉತ್ಪಾದನಾ ವೆಚ್ಚದ ಏರಿಕೆಯನ್ನು ಪರಿಹರಿಸಲು ಮತ್ತು ಉತ್ಪಾದಕರಿಗೆ ಸಹಾಯ ಮಾಡಲು ಹಾಲಿನ ದರವನ್ನು ಹೆಚ್ಚಿಸುವ ಪ್ರಸ್ತಾಪವಿದೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಆಗಸ್ಟ್ 1 ರಿಂದ ಅದರ ಅನುಷ್ಠಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಹಾಲಿನ ಬೆಲೆ ಹೆಚ್ಚಾದಂತೆ ಎಲ್ಲಾ ಹಾಲಿನ ಉತ್ಪನ್ನಗಳ ಬೆಲೆಯೂ ಏರಿಕೆಯಾಗಲಿದೆ.