ನವದೆಹಲಿ: ದೇಶದಲ್ಲಿ ತೈಲ ಕಂಪನಿಗಳು ವಾಣಿಜ್ಯ ಅನಿಲ ಸಿಲಿಂಡರ್ ಗಳ ಬೆಲೆಯನ್ನು ಹೆಚ್ಚಿಸಿದೆ.
ದೇಶದ ಅತಿದೊಡ್ಡ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ( ಐಒಸಿ) 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ಬರೋಬ್ಬರಿ 250 ರೂ. ಗೆ ಏರಿಸಿದೆ.
ದೆಹಲಿಯಲ್ಲಿ ಅದನ್ನು ಮರುಭರ್ತಿ ಮಾಡಲು 2253 ರೂ. ಅದೇ ಸಮಯದಲ್ಲಿ, ಕೋಲ್ಕತಾದಲ್ಲಿ ಈಗ 2087 ರೂ.ಗಳ ಬದಲು 2351 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ ಮತ್ತು ಮುಂಬೈನಲ್ಲಿ 1955 ರೂ. ಗಳ ಬದಲು, ಇಂದಿನಿಂದ 2205 ರೂ., ಚೆನ್ನೈನಲ್ಲಿ ಈಗ 2138 ರೂ.ಗಳ ಬದಲು 2406 ರೂ.ಇದೆ.