ವಾಷಿಂಗ್ಟನ್( ಅಮೆರಿಕ): 50 ವರ್ಷದ ಬಳಿಕ ಇದೀಗ ನಾಲ್ಕು ಮಂದಿ ಗಗನಯಾನಿಗಳು ಚಂದ್ರನ ಅಂಗಳದಲ್ಲಿ ಹಾರಾಟಕ್ಕೆ ಸಜ್ಜಾಗಿದ್ದು, ಇವರಿಗೆ ಗುರುವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಶ್ವೇತ ಭವನದಲ್ಲಿ ಆತಿಥ್ಯ ನೀಡಿದರು.ಈ ನಾಲ್ವರು ಗಗನಯಾನಿಗಳು ಮೊದಲಿಗೆ ನಾಸಾದ ಓರಿಯನ್ ಕ್ಯಾಪ್ಸುಲ್ನಲ್ಲಿ ಹಾರಾಡಲಿದ್ದಾರೆ. ಈ ವೇಳೆ, ಓವಲ್ ಕಚೇರಿಯಲ್ಲಿ ಅಪೋಲೋ ಕಾಲಘಟ್ಟದಲ್ಲಿ ಸಂಗ್ರಹಿಸಿ ಚಂದ್ರನ ಕಲ್ಲುಗಳನ್ನು ತೋರಿಸಲಾಯಿತು. 2024 ಅಂದರೆ ಮುಂದಿನ ವರ್ಷಾಂತ್ಯದೊಳಗೆ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಈ ಯೋಜನೆ ಸಾಕಾರಗೊಳ್ಳಲಿದೆ.
ಈ ನಾಲ್ವರು ಗಗನಯಾನಿಗಳು ಮೊದಲಿಗೆ ನಾಸಾದ ಓರಿಯನ್ ಕ್ಯಾಪ್ಸುಲ್ನಲ್ಲಿ ಹಾರಾಡಲಿದ್ದಾರೆ. 2024 ಅಂದರೆ ಮುಂದಿನ ವರ್ಷಾಂತ್ಯದೊಳಗೆ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಈ ಬಾಹ್ಯಾಕಾಶ ಉಡಾವಣಾ ವ್ಯವಸ್ಥೆಯಿಂದ ಇವರ ಪ್ರಯಾಣ ಆರಂಭ ಆಗಲಿದೆ. ಅವರು ಚಂದ್ರನ ಕಕ್ಷೆಯಲ್ಲಿ ಇಳಿಯುವುದಿಲ್ಲ. ಬದಲಾಗಿ ಚಂದ್ರನ ಸುತ್ತ, ಭೂಮಿಗೆ ನೇರವಾಗಿ ಹಾರಾಟ ನಡೆಸಲಿದ್ದಾರೆ. ವರ್ಷದ ಬಳಿಕ ಚಂದ್ರನ ಅಂಗಳದಲ್ಲಿ ಇಳಿಯುವ ಯೋಜನೆ ರೂಪಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಆರ್ಟೆಮಿಸ್ II ಮೂವರು ಅಮೆರಿಕನ್ ಮತ್ತು ಒಬ್ಬ ಕೆನಡಿಯನ್ ಈ ಗಗನಯಾನ ಕೈಗೊಳ್ಳುವುದಾಗಿ ಘೋಷಣೆ ಮಾಡಲಾಗಿತ್ತು. ಯೋಜನೆಗೆ ಅವರನ್ನು ಹೆಸರಿಸಿದ ನಂತರ ಶ್ವೇತಭವನದಲ್ಲಿ ಆತಿಥ್ಯ ನೀಡುವ ಭರವಸೆ ಪೂರ್ಣಗೊಳಿಸಿದರು. ಇದೇ ವೇಳೆ, ಅವರು ಉಪ ಅಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾದರು. ಅವರ ನಾಯಕತ್ವದಲ್ಲಿ ನಮ್ಮ ಈ ಅದ್ಭುತ ಪ್ರಯಾಣ ಸಾಧ್ಯವಾಗುತ್ತಿದ್ದು, ಅವರನ್ನು ಭೇಟಿಯಾಗಿ, ಕೈ ಕುಲುಕಿ ಮಾತನಾಡಿಸಿದ್ದು ಸಂತಸವಾಗಿದೆ ಎಂದು ಪೈಲಟ್ ವಿಕ್ಟರ್ ಗ್ಲೊವರ್ ತಿಳಿಸಿದ್ದಾರೆ.
ಈ ನಾಲ್ಕು ಜನರನ್ನು ಚಂದ್ರನತ್ತ ಕಳುಹಿಸಲು ಅತಿ ದೊಡ್ಡ ತಂಡ ಕೆಲಸ ಮಾಡಲಿದೆ. ನಿತ್ಯ ನಾವು ಈ ಯೋಜನೆಗೆ ಕಾರ್ಯ ನಿರ್ವಹಿಸಲಿದ್ದೇವೆ ಎಂದು ಯೋಜನೆಯ ಸ್ಪೆಷಲಿಸ್ಟ್ ಆಗಿರುವ ಕೆನಡಿಯನ್ ಗುಂಪಿನ ಸದಸ್ಯ ಜೆರೆಮೆ ಹ್ಯಾನ್ಸೆನ್ ತಿಳಿಸಿದರು. ಅಮೆರಿಕದಿಂದ ಹೊರತಾಗಿರುವ ಸಿಬ್ಬಂದಿಗಳನ್ನು ಸೇರಿಸಿಕೊಂಡಿರುವ ಮೊದಲ ಚಂದ್ರ ಯೋಜನೆಯ ತಂಡ ಇದಾಗಿದೆ. ಅಪೋಲೋ ಬಳಿಕ ನಾಸಾದ ಹೊಸ ಚಂದ್ರ ಕಾರ್ಯಕ್ರಮ ಆರ್ಟೆಮಿನ್ನ ಮೊದಲ ಸಿಬ್ಬಂದಿ ಕೂಡ ಇವರಾಗಿದ್ದಾರೆ. ಕಳೆದ ವರ್ಷ ಖಾಲಿ ಓರಿಯನ್ ಕ್ಯಾಪ್ಸುಲ್ ಚಂದ್ರನ ಸುತ್ತ ಹಾರಾಟ ನಡೆಸಿತ್ತು.
ಆಗಸ್ಟ್ನಲ್ಲಿ ಈ ಗಗನಯಾನಿಗಳು ಈ ಬಾಹ್ಯಕಾಶಯಾನದ ಮೊದಲ ನೋಟವನ್ನು ಪಡೆದಿದ್ದರು. ಆದರೆ ಕ್ಯಾಪ್ಸುಲ್ನ ಹೀಟ್ ಶೀಲ್ಡ್ ತಡವಾದ ಹಿನ್ನಲೆ ಅವರ ಹಾರಾಟ ವಿಳಂಬವಾಗಿದೆ. ಕಳೆದ ವರ್ಷ ಚಂದ್ರನ ಸುತ್ತಲ್ಲಿನ ಈ ಪರೀಕ್ಷಾ ಹಾರಾಟದಲ್ಲಿ ಯಾರು ಕೂಡ ಇರಲಿಲ್ಲ. ಈ ವೇಳೆ ಅನಿರೀಕ್ಷಿತ ಶಾಖದಿಂದ ಸುಟ್ಟು, ವಸ್ತುಗಳು ಹಾಳಾಯಿತು. ಈ ಹೀಟ್ ಶೀಲ್ಡ್ ಎಂಬುದು ಮರುಪ್ರವೇಶದ ತೀವ್ರ ಶಾಖದ ವಿರುದ್ಧ ಕ್ಯಾಪ್ಸುಲ್ ಅನ್ನು ಸಂರಕ್ಷಣೆ ಮಾಡಲಿದೆ.1962ರ ಚಂದ್ರಯಾದದ ಬಗ್ಗೆ ಜಾನ್ ಎಫ್ ಕೆನಡಿ ಅಂದು ಮಾಡಿದ ದ ಭಾಷಣದ ಬಗ್ಗೆ ಬೈಡನ್ ಮಾತನಾಡಿದರು ಎಂದು ಯೋಜನೆಯ ಸ್ಪೆಷಲಿಸ್ಟ್ ಕ್ರಿಸ್ಟಿನಾ ಕೊಚ್ ತಿಳಿಸಿದರು.
ಇನ್ನು ಈ ಕುರಿತ ದಿನಾಂಕವನ್ನು ನಾವು ಯೋಚಿಸಿಲ್ಲ ಎಂದು ಕಮಾಂಡರ್ ರೇಡ್ ವೈಸ್ಮ್ಯಾನ್ ತಿಳಿಸಿದ್ದಾರೆ. ನಾಸಾ ಮತ್ತು ವಾಹನ ಯಾವಾಗ ಸಿದ್ದವಾಗುತ್ತದೆಯೋ ಆಗ ನಾವು ಹೋಗುತ್ತೇವೆ. ಈ ನಡುವೆ ನಾಲ್ಕು ಮಂದಿ ಸಿದ್ಧತೆ ನಡೆಸಲಿದ್ದಾರೆ. ಅವರು ಹೇಗೆ ಸುರಕ್ಷಿತವಾಗಿ ಹೋಗಿ ಬರುವುದು ಮಿಷನ್ ನಿಯಂತ್ರಣದ ಕೆಲಸ ನಿರ್ವಹಿಸಲಿದ್ದಾರೆ. ಫೆಬ್ರವರಿಯಿಂದ ಡ್ರೆಸ್ನ ಪೂರ್ವ ತಯಾರಿ ನಡೆಸಲಿದ್ದಾರೆ. ಅಲ್ಲಿ ಅವರು ಫೆಸಿಫಿಕ್ ಸಾಗರದಲ್ಲಿನ ಕ್ಯಾಪ್ಸುಲ್ ಮೇಲೆ ಸುತ್ತಾಟದ ಅಭ್ಯಾಸ ನಡೆಸಲಿದ್ದಾರೆ.