ಬಜಪೆ: ಇಲ್ಲಿನ ವಿಜಯ ವಿಠಲ ಭಜನಾ ಮಂದಿರ ಬಳಿಯ ಮನೆಯೊಂದರಲ್ಲಿ 11 ತಿಂಗಳ ಮಗುವಿನ ಎದುರಿನಲ್ಲಿಯೇ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತಪಟ್ಟ ಮಹಿಳೆಯನ್ನು ಬಜಪೆಯ ಶಿಲ್ಪಾ ಜುವೆಲ್ಲರ್ಸ್ನ ಮಾಲಕ ಅಶೋಕ ಆಚಾರ್ಯ ಅವರ ಮಗಳು ಶಿಲ್ಪಾ ಆಚಾರ್ಯ (28) ಎಂದು ಗುರುತಿಸಲಾಗಿದೆ.
ಪತಿ ಪಡುಬಿದ್ರಿಯ ಶ್ರೀರಾಮ್ ಆಚಾರ್ಯ ಹಾಗೂ ಶಿಲ್ಪಾ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಹೆರಿಗೆಗಾಗಿ ಊರಿಗೆ ಬಂದವರು ಇಲ್ಲಿಯೇ ಆನ್ಲೈನ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಶಿಲ್ಪಾ ಅವರು ತಾಯಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪುಟ್ಟ ಮಗುವಿನ ಎದುರೇ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಸಹೋದರ ಸುಹಾಸ್ ಆಚಾರ್ಯ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.