ಕಾರ್ಕಳ: ದ ಮೋರಲ್ ಎಥಿಕ್’ ಕಿರುಚಿತ್ರ ಬಿಡುಗಡೆ

 ಕಾರ್ಕಳ: ದೃಶ್ಯ ಕಲೆಯಿಂದ ಮನಸ್ಸಿನ ಪರಿವರ್ತನೆ ಸಾಧ್ಯ. ಸಾಮಾಜಿಕ ಕಳಕಳಿಯ ನೀತಿಯುಕ್ತ ಚಲನ ಚಿತ್ರ –ಕಿರು ಚಿತ್ರಗಳು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಾಗ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು  ಪೆರ್ವಾಜೆ ಶ್ರೀ ಮೂಕಾಂಬಿಕಾ ದತ್ತಾತ್ರೇಯ ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ದಿವಾಕರ ಶೆಟ್ಟಿ ಹೇಳಿದರು.

ಈ ಚಿತ್ರದ ನಿರ್ದೇಶಕ ಚಂದ್ರನಾಥ ಬಜಗೋಳಿ ಅವರ  ‘ದ ಮೋರಲ್ ಎಥಿಕ್’ ಕಿರುಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಈ ಎರಡುವರೆ ನಿಮಿಷದ  ಕಿರುಚಿತ್ರ ಆಳವಾದ ಸಂದೇಶವನ್ನು ನೀಡುತ್ತದೆ ಮತ್ತೆ ಮತ್ತೆ ನೋಡಿಸುವ ಈ ಕಿರುಚಿತ್ರವನ್ನು  ಆಸ್ವಾದಿಸೋಣ ಎಂದರು.

ನಿರ್ಮಾಪಕ ಸದಾಶಿವ ಶೆಟ್ಟಿ ಪೆರ್ವಾಜೆ, ನಟರಾದ ಉಮೇಶ್ ರಾವ್, ಸಂದೇಶ್ ಪಿ.ಕೆ., ನಮ ತುಳುವೆರ್ ಕಲಾ ಸಂಘಟನೆಯ ಸುಕುಮಾರ್ ಮೋಹನ್, ಛಾಯಾಗ್ರಾಹಕ ಹರಿಶ್ ಪವಾರ್ ಮುಂತಾದವರು ಉಪಸ್ಥಿತರಿದ್ದರು. ಚಂದ್ರನಾಥ ಬಜಗೋಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ದೇವದಾಸ್ ಕೆರೆಮನೆ ನಿರೂಪಿಸಿದರು.