‘ದಿ ಕೇರಳ ಸ್ಟೋರಿ’ ಬಾಕ್ಸ್ ಆಫೀಸಿನಲ್ಲಿ ದಾಖಲೆ ಕಲೆಕ್ಷನ್ ಕಲೆ ಹಾಕುತ್ತಿದೆ. ರಿಲೀಸ್ ಆದ 7 ದಿನಕ್ಕೆ ಬರೋಬ್ಬರಿ 80 ಕೋಟಿ ರೂ. ಬಾಚುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.
ಅನೇಕ ಸಂಘಟನೆಗಳು ಸಿನಿಮಾವನ್ನು ಉಚಿತವಾಗಿ ತೋರಿಸುವ ಮೂಲಕ ಬಾಕ್ಸ್ ಆಫೀಸಿಗೆ ಆದಾಯ ಹರಿದು ಬರುವಂತೆ ಮಾಡುತ್ತಿದ್ದಾರೆ.
ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ನಿಷೇಧ ಹೇರಿದ್ದರೂ, ಸ್ವತಃ ಕೇರಳದಲ್ಲೇ ಸಿನಿಮಾ ಪ್ರದರ್ಶನಕ್ಕೆ ನಾನಾ ಅಡತಡೆಗಳನ್ನು ಒಡ್ಡಿದ್ದರೂ ಅದು ಹೇಗೆ ಐದೇ ದಿನಕ್ಕೆ ಐವತ್ತು ಕೋಟಿ ಕಲೆಕ್ಷನ್ ಆಗೋಕೆ ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ. ಬಾಲಿವುಡ್ ಸಿನಿ ಪಂಡಿತರ ಲೆಕ್ಕಾಚಾರದ ಪ್ರಕಾರ ಮೂರು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಘೋಷಣೆ ಮಾಡಿರುವುದರಿಂದ ಐವತ್ತು ಕೋಟಿ ರೂಪಾಯಿ ಗಳಿಸಲು ಸಾಧ್ಯ ಎಂದು ಹೇಳಲಾಗುತ್ತಿದೆ.
ಸಿನಿಮಾ ಮೊದಲ ದಿನ ಸಾಧಾರಣ ಓಪನಿಂಗ್ ಪಡೆದುಕೊಂಡಿದ್ದರೂ, ಮುಂದಿನ ದಿನಗಳಲ್ಲಿ ಅಚ್ಚರಿ ಎನ್ನುವಂತೆ ದುಡ್ಡು ಬಾಕ್ಸ್ ಆಫೀಸಿಗೆ ಹರಿದು ಬಂದಿದೆ. ಶುಕ್ರವಾರ 8.03 ಕೋಟಿ ರೂ. ಶನಿವಾರ 11.22 ಕೋಟಿ ರೂ. ಭಾನುವಾರ 16 ಕೋಟಿ ರೂ. ಸೋಮವಾರ 10.07 ಕೋಟಿ ರೂ. ಮಂಗಳವಾರ 11.14 ಕೋಟಿ ರೂ. ಬುಧವಾರ 12 ಕೋಟಿ ರೂ. ಶುಕ್ರವಾರ ಕೂಡ ಅಂದಾಜು 12 ಕೋಟಿ ರೂಪಾಯಿ ಸೇರಿ ಭಾರತದಲ್ಲೇ ಏಳು ದಿನಕ್ಕೆ 80.86 ಕೋಟಿ ಗಳಿಕೆ ಮಾಡಿದೆ.