ಬೆಂಗಳೂರು: ‘ದೇಶದ ಹಿತದೃಷ್ಟಿಯಿಂದ ಒಂದು ವರ್ಷ ಚಿನ್ನ ಖರೀದಿಸಬೇಡಿ’ ಎಂದು ಪ್ರಧಾನಿ ಮೋದಿ ಕರೆ ನೀಡಿದ ಬಳಿಕ, ಮಾಜಿ ಪ್ರಧಾನಿ ಇಂದಿರಾಗಾಂಧಿ ಕೂಡ ಇದೇ ರೀತಿಯ ಮನವಿ ಮಾಡಿದ್ದರು ಎಂದು ಸೋಶಿಯಲ್ ಮೀಡಿಯಾಗಳಲ್ಲಿ ದಿ ಹಿಂದೂ The Hindu ಪತ್ರಿಕೆಯ ಹಳೆಯ ಮುಖಪುಟದ ಚಿತ್ರವು ವೈರಲ್ ಆಗಿತ್ತು. ಆದರೆ ಆ ಸುದ್ದಿ ಮತ್ತು ಫೋಟೋ ನಕಲಿ (ಫೇಕ್)ಎಂದು ದಿ ಹಿಂದೂ ಪತ್ರಿಕೆಯೇ ಸ್ಪಷ್ಟನೆ ನೀಡಿದೆ.
1967ರ ಜೂನ್ 6ರಂದು “ಇಂದಿರಾಗಾಂಧೀ ಚಿನ್ನ ಕೊಳ್ಳಬೇಡಿ ಎಂದು ಹೇಳಿದ ಯಾವುದೇ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲ ಎಂದು ‘ದಿ ಹಿಂದೂ’ ಸಂಸ್ಥೆ ತಿಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಣೆ ಹಂಚಿಕೊಂಡಿರುವ The Hindu, “1967 ಜೂನ್ 6ರ ‘ದಿ ಹಿಂದೂ’ ಮುಖಪುಟ ಎಂದು ಹೇಳಲಾಗುತ್ತಿರುವ ಡಿಜಿಟಲ್ ರೂಪದಲ್ಲಿ ಮಾರ್ಪಡಿಸಲಾದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಮ್ಮ ಆರ್ಕೈವ್‌ನ ಅಧಿಕೃತ ಪುಟವಲ್ಲ.ಇದನ್ನು ತಿರುಚಿ ಏಐ ಬಳಸಿ ಸೃಷ್ಟಿಸಲಾಗಿದೆ, ಓದುಗರು ಪತ್ರಿಕೆಯ ಪುಟಗಳನ್ನು ಹಂಚಿಕೊಳ್ಳುವ ಮೊದಲು ಎಚ್ಚರಿಕೆಯಿಂದಿರಬೇಕು” ಎಂದು ಹಿಂದೂ ಪತ್ರಿಕೆ ಹೇಳಿಕೆ ನೀಡಿದೆ.

















