ವ್ಯಕ್ತಿಯ ಜೀವನದ ಮೊದಲ 25 ವರ್ಷಗಳು ಆತನ ಸಂಪೂರ್ಣ ಜೀವನವನ್ನು ರೂಪಿಸುತ್ತದೆ: ವಿದ್ಯಾವಂತ ಆಚಾರ್ಯ

ಕಾರ್ಕಳ: ಅಕ್ಷರಂ ಬ್ರಹ್ಮಾಸಿ ಎಂದರೆ ‘ಅಕ್ಷರವೇ ದೇವರು’. ಯಾರು ಅದನ್ನು ಹೇಳಿಕೊಡುತ್ತಾರೆ ಅವರು ದೇವರಿಗೆ ಸಮಾನ. ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಶಿಕ್ಷಣಕ್ಕಿರುವ ಮಹತ್ವ ಬೇರೆ ಯಾವ ಚಟುವಟಿಕೆಗಳಿಗೂ ಇಲ್ಲ. ನಮ್ಮ ಜೀವನದ ಮೊದಲ 25 ವರ್ಷಗಳು ಏನು ಮಾಡುತ್ತೇವೆ, ಅದೇ ನಮ್ಮ ಮುಂದಿನ 75 ವರ್ಷ ನಾವು ಪಾಲಿಸಿಕೊಂಡು ಹೋಗುತ್ತೇವೆ. ಹೀಗಾಗಿ ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಎಳವೆಯಲ್ಲೇ ಒಳ್ಳೆಯ ವಿಚಾರಗಳನ್ನು ತಿಳಿಹೇಳಬೇಕು ಎಸ್.ಆರ್.ಎಸ್ ನ ನಿರ್ದೇಶಕ ವಿದ್ಯಾವಂತ ಆಚಾರ್ಯ ಅಭಿಪ್ರಾಯಪಟ್ಟರು.

ಅವರು ಜ. 6 ರಂದು ಬೈಲೂರಿನ ವಾಸುದೇವ ಕೃಪಾ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಕೆ.ಅಣ್ಣಪ್ಪ ಶೆಣೈ, ಮುಖ್ಯ ಅತಿಥಿ ವಿದ್ಯಾವಂತ ಆಚಾರ್ಯ, ಪಿಟಿಎ ಅಧ್ಯಕ್ಷ ಮಿಥುನ್ ಮನೋಹರ್ ಶೆಣೈ, ಮುಖ್ಯ ಶಿಕ್ಷಕಿ ಅಕ್ಷತಾ ಅವಿನಾಶ್ ಕಾಮತ್, ಶಾಲಾ ವಿದ್ಯಾರ್ಥಿ ನಾಯಕ ವಂಶ್ ವೇದಿಕೆಯಲ್ಲಿದ್ದರು.

ಶ್ರೀಮತಿ ಚಿತ್ರಾ ಪುರಂದರ್ ಸ್ವಾಗತಿಸಿದರು. ಮುಖ್ಯ ಅತಿಥಿಗಳ ಜೀವನದ ಸಾಧನೆಯನ್ನು ಶ್ರೀಮತಿ ಶೈಲಜಾ ಶೆಟ್ಟಿ ವಾಚಿಸಿದರು. ಮುಖ್ಯ ಶಿಕ್ಷಕಿ ಅಕ್ಷತಾ ಅವಿನಾಶ ಕಾಮತ್ 2022- 23ರ ಶಾಲಾ ಮಕ್ಕಳ ಮತ್ತು ಶಿಕ್ಷಕರ ಸಾಧನೆಯ ಸಂಪೂರ್ಣ ವರದಿ ವಾಚಿಸಿದರು. ಶ್ರೀಮತಿ ದಿವ್ಯ ಕುಡ್ವ ವಂದಿಸಿದರು.