ಉಡುಪಿ: ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ತಾರತಮ್ಯವನ್ನು ಹೋಗಲಾಡಿಸಿ ದೇಶದ ಸಂವಿಧಾನದ ಆಶಯದಂತೆ ಸಮಾನತೆಯ ಪ್ರತೀಕವಾದ “ಸಮವಸ್ತ್ರ” ಸಂಹಿತೆಯನ್ನು ಎತ್ತಿ ಹಿಡಿಯುವ ಮೂಲಕ ಹಿಜಬ್ ಮೂಭೂತ ಹಕ್ಕು ಎಂದು ಸಾಬೀತು ಆಗದ ಕಾರಣ ಗೌರವಾನ್ವಿತ ಉಚ್ಚನ್ಯಾಯಾಲಯವು ಈ ಮಹತ್ವದ ತೀರ್ಪನ್ನು ನೀಡಿದೆ ಎಂದು ಸಾಮಾಜಿಕ ಕಾರ್ಯಕರ್ತ ರಾಕೇಶ್ ಬಿರ್ತಿ ಹೇಳಿದ್ದಾರೆ.
ಯಾವ ಧರ್ಮವೂ ದೇಶದ ಸಂವಿಧಾನಕ್ಕಿಂತ ದೊಡ್ಡದಲ್ಲ ಎನ್ನುವುದು ತೀರ್ಪಿನ ಸಾರಾಂಶ. ನ್ಯಾಯಾಲಯದ ತೀರ್ಪಿಗೆ ತಲೆಬಾಗಲೇಬೇಕು ಎಂದಿದ್ದಾರೆ.












