ವ್ಯಸನಗಳಿಂದ ದೂರವಿರುವುದೇ ಏಡ್ಸ್ ನಿರ್ಮೂಲನೆಯ ಮೂಲ ಮಂತ್ರ

ಉಡುಪಿ: ದಾಂಪತ್ಯ ನಿಷ್ಠೆ, ಸುರಕ್ಷತೆಯಿಂದ ಮಾತ್ರ ಏಡ್ಸ್ ನಂತಹ ಮಾರಣಾಂತಿಕ ಖಾಯಿಲೆಯಿಂದ ದೂರವಿರಲು ಸಾಧ್ಯ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಈ ಖಾಯಿಲೆಗೆ ಇನ್ನೂ ಔಷಧ ಕಂಡುಹುಡುಕಲು ಸಾಧ್ಯವಾಗಲಿಲ್ಲ.

ಏಡ್ಸ್ ಖಾಯಿಲೆಯು ನಮ್ಮನ್ನು ಭಾಧಿಸದಂತೆ ಇರಬೇಕಾದರೆ ನಾವು ಜಾಗೃತರಾಗಿರಬೇಕಾಗಿದೆ. ಅರಿವಿನಿಂದ ಮಾತ್ರ ಆರೋಗ್ಯವಂತ ಬದುಕು ಸಾಧ್ಯ ಎಂದು ಉಡುಪಿ ಜಿಲ್ಲಾ ‌ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಸಂಯೋಜನಾಧಿಕಾರಿಗಳಾದ ಮಹಾಬಲೇಶ್ವರ ಅವರು ಅಭಿಪ್ರಾಯಪಟ್ಟರು.

ಅವರು ದಿನಾಂಕ 15-04-26 ರಂದು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆದ ಏಡ್ಸ್ ಜಾಗೃತಿ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಕಾಂತ ಭಟ್ ಅವರು ವಹಿಸಿಕೊಂಡಿದ್ದರು.

ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕರಾದ ಡಾ.ರಾಘವೇಂದ್ರ ಎಲ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಚಿರಂಜನ್ ಕೆ. ಶೇರಿಗಾರ್ ಮತ್ತು ಡಾ.ಪ್ರಜ್ಞಾ ಮಾರ್ಪಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನೂ ವಿತರಿಸಲಾಯಿತು.

ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕರಾದ ದಿಲೀಪ್ ರಾವ್ ಸ್ವಾಗತಿಸಿ, ಸ್ವಯಂ ಸೇವಕಿಯಾದ ಕು.ನವ್ಯ ಅವರು ವಂದಿಸಿದರು.

ಸ್ವಯಂ ಸೇವಕಿಯಾದ ಕು.ಆಶ್ಮಿತ ಕಾರ್ಯಕ್ರಮ ನಿರೂಪಿಸಿದರು.