ಟಾಸ್​ ಗೆದ್ದ ಆಸೀಸ್​​ ಬೌಲಿಂಗ್​ ಆಯ್ಕೆ; ದುಬೆ, ಸುಂದರ್​ಗಿಲ್ಲ ಸ್ಥಾನ : ಬೆಂಗಳೂರು ಟಿ20

ಬೆಂಗಳೂರು: ಉಭಯ ತಂಡಗಳಲ್ಲಿ ತಲಾ ಒಂದೊಂದು ಬದಲಾವಣೆಗಳಾಗಿದೆ. ನಾಯಕ ಸೂರ್ಯಕುಮಾರ್​ ಯಾದವ್ ಅವರು ವೇಗಿ​ ದೀಪಕ್​ ಚಹಾರ್​ ಬದಲಿಗೆ ಎಡಗೈ ಬೌಲರ್​ ಅರ್ಶದೀಪ್ ಸಿಂಗ್​ಗೆ ಮರಳಿ ಅವಕಾಶ ನೀಡಿದ್ದಾರೆ. ಆಸೀಸ್​ನಲ್ಲಿ ಗ್ರೀನ್​ ಬದಲು ವೇಗಿ ನಾಥನ್​ ಎಲ್ಲಿಸ್ ಆಡುತ್ತಿದ್ದಾರೆ. ಆದರೆ ಟೀಮ್​ ಇಂಡಿಯಾದಲ್ಲಿ ಇದುವರೆಹೆ ಬೆಂಚ್​ ಕಾದಿದ್ದ ಆಲ್​ರೌಂಡರ್​​ ಶಿವಂ ದುಬೆ ಮತ್ತು ವಾಷಿಂಗ್ಟನ್​ ಸುಂದರ್​ಗೆ ಕೊನೆಯ ಪಂದ್ಯದಲ್ಲೂ ಅವಕಾಶ ಸಿಕ್ಕಿಲ್ಲ.

ಬೆಂಗಳೂರು ಪಿಚ್​ ಚೇಸಿಂಗ್​ಗೆ ಹೆಸರುವಾಸಿಯಾಗಿದ್ದು, ಆಸೀಸ್​ ನಾಯಕ ಇದೇ ತಂತ್ರವನ್ನು ಬಳಸಿಕೊಂಡಿದ್ದಾರೆ.ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸರಣಿಯ ಅಂತಿಮ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದ ಆಸ್ಟ್ರೇಲಿಯಾ ನಾಯಕ ಮ್ಯಾಥ್ಯೂ ವೇಡ್​ ಭಾರತ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದ್ದಾರೆ​.ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ ಟಾಸ್​ ಸೋತ ಭಾರತ ಮೊದಲು ಬ್ಯಾಟಿಂಗ್​ ಮಾಡುತ್ತಿದೆ.
ತಂಡಗಳು
ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಜೋಶ್ ಫಿಲಿಪ್, ಬೆನ್ ಮೆಕ್‌ಡರ್ಮಾಟ್, ಆರನ್ ಹಾರ್ಡಿ, ಟಿಮ್ ಡೇವಿಡ್, ಮ್ಯಾಥ್ಯೂ ಶಾರ್ಟ್, ಮ್ಯಾಥ್ಯೂ ವೇಡ್ (ನಾಯಕ / ವಿಕೆಟ್​ ಕೀಪರ್​), ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್‌ಡಾರ್ಫ್, ತನ್ವೀರ್ ಸಂಘ.
ಭಾರತ: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ(ವಿಕೆಟ್​ ಕೀಪರ್​), ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಅವೇಶ್ ಖಾನ್, ಮುಖೇಶ್ ಕುಮಾರ್, ಅರ್ಶದೀಪ್ ಸಿಂಗ್