ಮಂಗಳೂರಿನ ರಂಗಭೂಮಿಯ ರೋಚಕ ಇತಿಹಾಸದಲ್ಲಿ ಅರೆಹೊಳೆ ನಾಟಕೋತ್ಸವದ ಕೊಡುಗೆಯೂ ಶ್ಲಾಘನಾರ್ಹ: ಮನೋಹರ ಪ್ರಸಾದ್

ಮಂಗಳೂರು: ಮಂಗಳೂರಿನ ರಂಗಭೂಮಿಯ  ಚಟುವಟಿಕೆಯಲ್ಲಿ ಹಾಗೂ ಅದರ ಬೆಳವಣಿಗೆಯಲ್ಲಿ ಅರೆಹೊಳೆ ನಾಟಕೋತ್ಸವದ ಕೊಡುಗೆಯೂ ಶ್ಲಾಘನಾರ್ಹ ಎಂದು ಖ್ಯಾತ ಪತ್ರಕರ್ತ ಮನೋಹರ ಪ್ರಸಾದ್ ರವರು ಹೇಳಿದರು.

ಅವರು ಅರೆಹೊಳೆ ಪ್ರತಿಷ್ಠಾನವು ಅಸ್ತಿತ್ವ (ರಿ) ಮತ್ತು‌ ಲಯನ್ಸ್ ಮತ್ತು  ಲಿಯೋಕ್ಲಬ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಅರೆಹೊಳೆ ನಾಟಕೋತ್ಸವ -2022  ನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.

ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ, ಅರೆಹೊಳೆ ಪ್ರತಿಷ್ಠಾನದ ಗೌರವ ಸಲಹೆಗಾರ ಕೆ ಸಿ ಪ್ರಭು, ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಅಧ್ಯಕ್ಷ ಜಗದೀಶ್ ಪೈ ಉಪಸ್ಥಿತರಿದ್ದರು.

ನಂತರ ಬೆಂಗಳೂರಿನ ಅಂತರಂಗ- ಬಹಿರಂಗ ತಂಡದಿಂದ ಯಥಾಪ್ರಕಾರ ನಾಟಕ ಪ್ರಸ್ತುತಗೊಂಡಿತು.

ಅರೆಹೊಳೆ ಸದಾಶಿವ ರಾವ್ ಸ್ವಾಗತಿಸಿದರು. ಶ್ವೇತಾ ನಿರೂಪಿಸಿದರು.