ಬಲ್ಲವರೇ ಬಲ್ಲರು ಬೆಲ್ಲದ ರುಚಿಯ ಎನ್ನುವ ಮಾತೇ ಇದೆ. ಅಂದರೆ ರುಚಿ ರುಚಿ ಇರೋದು ಬೆಲ್ಲದ ಗುಣ. ಆದರೆ ಈಗ ಮಾರುಕಟ್ಟೆಯಲ್ಲಿ ಸಿಗುವ ಬೆಲ್ಲ ರುಚಿ ಏನೋ ಇರುತ್ತದೆ , ಆದರೆ ಹೀಗೆ ರುಚಿ ಇರುವ ಬಹುತೇಕ ಬೆಲ್ಲಗಳು ಫೇಕ್ ಬೆಲ್ಲಗಳು. ಅಂದರೆ ನಕಲಿ ಬೆಲ್ಲ. ನಕಲಿ ಮತ್ತು ಅಸಲಿ ಬೆಲ್ಲ ಎಂದು ಗುರುತಿಸೋದು ಹೇಗೆ? ಇಲ್ಲಿ ನಾವ್ ಕೊಟ್ಟಿದ್ದೇವೆ ಮಾಹಿತಿ
ಶುದ್ದ ಬೆಲ್ಲವು ಮೃದುವಾಗಿ ಮತ್ತು ಹಗುರವಾಗಿರುತ್ತದೆ. ಈ ಬೆಲ್ಲವನ್ನು ಒಡೆದರೆ ಒಂದೇ ಎಸೆತಕ್ಕೆ ಪುಡಿಯಾಗುತ್ತದೆ. ಆದರೆ ನಕಲಿ ಬೆಲ್ಲ ಗಟ್ಟಿಯಾಗಿರುತ್ತದೆ. ಪುಡಿಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ.
ನಕಲಿ ಬೆಲ್ಲಕ್ಕೆ ಸಲ್ಪರ್ ಬೆರೆಸಿರುತ್ತಾರೆ, ಇದನ್ನು ಪರೀಕ್ಷಿಸೋದು ಹೇಗಂದ್ರೆ, ಒಂದು ತುಂಡು ಬೆಲ್ಲವನ್ನು ನೀರಿನಲ್ಇ ಸರಿಯಾಗಿ ಕರಗಿಸಿಕೊಂಡು ಇಡಬೇಕು, ಅದಕ್ಕೆ ಕೆಲವು ಹನಿ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಬೇಕು, ಹೀಗೆ ಮಾಡಿದಾಗ ಅದರಲ್ಲಿ ಗುಳ್ಳೆಗಳು ಕಾಣಿಸಿಕೊಂಡರೆ ಬೆಲ್ಲ ಕಲಬೆರಕೆ ಬೆಲ್ಲವೆಂದು ಅರ್ಥ.

ಶುದ್ದ ಬೆಲ್ಲದ ಬಣ್ಣ ಕಂದು ಅಥವಾ ಹಳದಿ, ಕಪ್ಪು. ಬೆಲ್ಲದ ಬಣ್ಣ ತೀರಾ ಹೊಳೆಯುತ್ತಿದ್ದರೆ ಅದು ಕಲಬೆರೆಕೆ ಬಣ್ಣ ಎಂದರ್ಥ. ಒಂದು ಸಣ್ಣ ತುಂಡು ಬೆಲ್ಲವನ್ನು ನೀರಿನಲ್ಲಿ ಕರಗಿಸಿ ನೋಡಿ, ನೀರಿನ ಬಣ್ಣ ಬದಲಾದರೆ, ಆ ಬೆಲ್ಲಕ್ಕೆ ಕರಬೆರಕೆ ಬಣ್ಣ ಸೇರಿಸಿದ್ದಾರೆ ಎನ್ನುವುದು ಖಚಿತ.

ಶುದ್ದ ಬೆಲ್ಲವನ್ನು ಬಿಸಿ ಮಾಡಿದರೆ ಕರಗಿ ಒಳ್ಳೆಯ ದಪ್ಪ ದ್ರವವಾಗುತ್ತದೆ. ಆದರೆ ನಕಲಿ ಬೆಲ್ಲ ಬಿಸಿ ಮಾಡಿದರೆ ಕೊನೆಗೆ ಸಕ್ಕರೆ ಹರಳು ಸಿಗುತ್ತದೆ ಅಥವಾ ಬೆಲ್ಲ ಕರಗಿ ಕೊನೆಗೆ ಏನೂ ಕಾಣಿಸುದೇ ಇಲ್ಲ, ಹೀಗಾದರೆ ಅದು ನಕಲಿ ಬೆಲ್ಲ.
ಇಷ್ಟೆಲ್ಲಾ ಅಂಶಗಳನ್ನು ಗಮನಿಸಿ, ಇನ್ನು ಮುಂದೆ ಮಾರುಕಟ್ಟೆಯಿಂದ ಬೆಲ್ಲ ಖರೀದಿಸಿದರೆ ಇಷ್ಟನ್ನು ಮಾಡಿ ನೋಡಿ, ಅಸಲಿ ಬೆಲ್ಲ ಯಾವುದು ನಕಲಿ ಬೆಲ್ಲ ಯಾವುದು ನೀವೇ ಕಂಡುಕೊಳ್ಳಿ.












