ಅಂಬಾಗಿಲು ನ್ಯಾಚುರಲ್ ಗ್ರಾನೈಟ್ ಎಂಡ್ ಟೈಲ್ಸ್ ಶೋರೂಂ ದಶಮಾನೋತ್ಸವ

ಉಡುಪಿ: ಅಂಬಾಗಿಲಿನಲ್ಲಿರುವ ನ್ಯಾಚುರಲ್ ಗ್ರಾನೈಟ್ ಎಂಡ್ ಟೈಲ್ಸ್ ಶೋರೂಂನ ದಶಮಾನೋತ್ಸವ ಕಾರ್ಯಕ್ರಮ ಬುಧವಾರ ನಡೆಯಿತು.

ಮಾಂಡವಿ ರಿಯಲ್ ಎಸ್ಟೇಟ್ ಎಂಡ್ ಡೆವೆಲಪರ್ಸ್ ನ ಎಂಡಿ, ಡಾ.ಜೆರಿ ವಿನ್ಸೆಂಟ್ ಡಯಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಮನೆ ಕಟ್ಟುವವರು ಇತರರ ಮನೆಗಳಿಗಿಂತ ತಮ್ಮ ಮನೆ ಭಿನ್ನವಾಗಿರಬೇಕೆಂದು ಯೋಚಿಸುತ್ತಾರೆ. ಅದಕ್ಕೆ ಪೂರಕವಾಗಿ ಗುಣಮಟ್ಟದ ಕಟ್ಟಡ ನಿರ್ಮಾಣ ಸಾಮಾಗ್ರಿ ಒಂದೇ ಸೂರಿನಡಿ ದೊರೆಯುವ ಶೋರೂಂ ಆಯ್ಕೆ ಮಾಡುತ್ತಾರೆ. ಎಲ್ಲ ಬಗೆಯ ಸಾಮಾಗ್ರಿಗಳ ವಿತರಣೆಯೊಂದಿಗೆ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾದ ಈ ಮಳಿಗೆಯು ಅಭಿವೃದ್ದಿ ಮತ್ತಷ್ಟು ಶಾಖೆ ತೆರೆಯಲಿ ಎಂದು ಹಾರೈಸಿದರು.

ಎ.ಜಿ ಅಸೋಸಿಯೇಟ್ಸ್ ನ ಎಂ ಗೋಪಾಲ್ ಭಟ್, ಎಸಿಸಿಇಎ ಉಡುಪಿ ಇದರ ಅಧ್ಯಕ್ಷ ಯೋಗೀಶ್ಚಂದಧರ, ಮಾಜಿ ಅಧ್ಯಕ್ಷ ಪಾಂಡುರಂಗ ಆಚಾರ್ ಕೆ., ಕಾವೇರಿ ಬಿಲ್ಡರ್ಸ್ ನ ಎನ್.ಎಂ. ಹೆಗ್ಡೆ ಶುಭಹಾರೈಸಿದರು.

ಶ್ರಶೋರೂಂನಲ್ಲಿ ವಿಶಾಲ ಶ್ರೇಣಿಯ ಅತ್ಯುತ್ತಮ ಗುಣಮಟ್ಟದ ಗ್ರಾನೈಟ್, ತಂದೂರ್, ವಿಟ್ರಿಫೈಡ್, ಗ್ಲೇಜ್ಡ್ ಗ್ಲಾಸ್ ಟೈಲ್ಸ್, ಸ್ಯಾನಿಟರಿ ವೇರ್, ಇತ್ಯಾದಿ ರಿಯಾಯತಿ ದರದಲ್ಲಿ ದೊರೆಯಲಿವೆ ಎಂದು ಮಾಲಕ ನಿಲೇಶ್ ಕರಡಿ ತಿಳಿಸಿದರು.

ಎಂಜಿನಿಯರ್ ನಿರಂಜನ್ ಕುಮಾರ್, ಸಂಸ್ಥೆಯ ಬಸಮ್ಮ ಕರಡಿ, ಸುಜಾತಾ ಕರಡಿ, ಸಾಗರ್ ಕರಡಿ, ನಿಧಿ ಕರಡಿ, ಮ್ಯಾನೇಜರ್ ಉದಯ ಕೆ.ಜಿ, ಗಣ್ಯರು, ಗ್ರಾಹಕರು ಉಪಸ್ಥಿತರಿದ್ದರು.

ನ್ಯಾಯವಾದಿ ಹಮ್ಜತ್ ಹೆಜಮಾಡಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.