ತೆಂಕಪೇಟೆ ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಮತ್ತು ಮಿತ್ರ ವೃಂದದ ವತಿಯಿಂದ ರಾಷ್ಟ್ರಧ್ವಜ ವಿತರಣೆ

ಉಡುಪಿ: ತೆಂಕಪೇಟೆ ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಮತ್ತು ಮಿತ್ರ ವೃಂದ ವತಿಯಿಂದ ಶನಿವಾರದಂದು ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಎದುರಿನ ಶ್ಯಾಮ ಪ್ರಸಾದ್ ಕುಡ್ವರವರ ಗೃಹ ಕಚೇರಿಯಲ್ಲಿ ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ಯು ವಿಶ್ವನಾಥ ಶೆಣೈ ಮನೆ ಮನೆಗೆ ರಾಷ್ಟ್ರ ಧ್ವಜ ವಿತರಣೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಯರಾಮ ಕಾಮತ್, ಮೋಹನ್ ದಾಸ್ ಶೆಣೈ, ವಿನಾಯಕ ಬಾಳಿಗಾ, ಸತೀಶ್ ಕಾಮತ್, ಇತರ ಗಣ್ಯರು ಉಪಸ್ಥಿತರಿದ್ದರು