ತೆಕ್ಕಟ್ಟೆ ಸರಕಾರಿ ಪ. ಪೂ. ಕಾಲೇಜಿನಲ್ಲಿ 2009-10ನೇ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಿವಿಧ ಪರಿಕರಗಳ ಹಸ್ತಾಂತರ ಕಾರ್ಯಕ್ರಮ

ಕುಂದಾಪುರ: ತೆಕ್ಕಟ್ಟೆ ಸರಕಾರಿ ಪ. ಪೂ. ಕಾಲೇಜಿನಲ್ಲಿ, ಪ್ರೌಢಶಾಲಾ ವಿಭಾಗದ ವತಿಯಿಂದ 2009-10ನೇ ಸಾಲಿನ SSLC ವಿದ್ಯಾರ್ಥಿಗಳಿಂದ ಶಾಲೆಗೆ ಪ್ರೊಜೆಕ್ಟರ್ ಹಾಗೂ ಟ್ರ್ಯಾಕ್ ಸೂಟ್ ಮೌಸ್ ಮತ್ತು ಕೀಬೋರ್ಡ್ ಹಸ್ತಾಂತರ ಕಾರ್ಯಕ್ರಮ ಆ.29 ರಂದು ಬೆಳಿಗ್ಗೆ 10.30 ಕ್ಕೆ ಜರಗಲಿದೆ. ಕಾರ್ಯಕ್ರಮದಲ್ಲಿ ಶೋಭನಾ ಶೆಟ್ಟಿ ಅಧ್ಯಕ್ಷರು, ಗ್ರಾಮ ಪಂಚಾಯತ್, ತೆಕ್ಕಟ್ಟೆ, ಶಿವರಾಮ ಶೆಟ್ಟಿ ಅಧ್ಯಕ್ಷರು, ಕಾಲೇಜು ಅಭಿವೃದ್ಧಿ ಸಮಿತಿ,  ವಿಜಯ ಭಂಡಾರಿ ಸದಸ್ಯರು, ಗ್ರಾಮ ಪಂಚಾಯತ್, ತೆಕ್ಕಟ್ಟೆ, ಶಾರದಾ ಹೊಳ್ಳ ಪ್ರಭಾರ ಪ್ರಾಂಶುಪಾಲರು, ಸ.ಪ.ಪೂ. ಕಾಲೇಜು ತೆಕ್ಕಟ್ಟೆ, ಸಂಧ್ಯಾರಾಣಿ ಕೆ. ಉಪ ಪ್ರಾಂಶುಪಾಲರು, ಸ.ಪ.ಪೂ. ಕಾಲೇಜು ತೆಕ್ಕಟ್ಟೆ  ಅಣ್ಣಪ್ಪ ಆಚಾರ್ಯ ಅಧ್ಯಕ್ಷರು, S.D.M.C, ಸ.ಪ.ಪೂ. ಕಾಲೇಜು ತೆಕ್ಕಟ್ಟೆ, ಚೇತನ್ ಶೆಟ್ಟಿ ಮತ್ತು 2009-10ನೇ ಸಾಅನ SSLC ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.