ಸಿಂಧನೂರು: ಮೂಗಿಗೆ ನಾಲ್ಕು ಹನಿ ಲಿಂಬೆ ರಸ ಹಾಕಿದರೆ ಆಕ್ಸಿಜನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂದು ಈಚೆಗೆ ಉದ್ಯಮಿ ವಿಜಯ್ ಸಂಕೇಶ್ವರ್ ಹೇಳಿದ್ದರು. ಈ ಹೇಳಿಕೆಯ ಬಳಿಕ ಹಲವರು ಲಿಂಬೆ ರಸದ ಪ್ರಯೋಗವನ್ನು ಮಾಡಿದ್ದರು.
ಅದೇ ರೀತಿ ಸಿಂಧನೂರಿನ ಶಿಕ್ಷಕರೊಬ್ಬರು ಬುಧವಾರ ಪ್ರಯೋಗ ಮಾಡಿದ್ದು, ಅವರು ಮೂಗಿಗೆ ನಿಂಬೆ ಹಣ್ಣಿನ ರಸ ಹಾಕಿಕೊಂಡ ತಕ್ಷಣವೇ ವಿಲವಿಲ ಒದ್ದಾಡಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಿಂಧನೂರು ಶರಣಬಸವೇಶ್ವರ ಕಾಲೊನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ್ (43) ಮೃತದುರ್ದೈವಿ. ಇವರಿಗೆ ಶೀತ ಕಾಣಿಸಿಕೊಂಡಿದ್ದು, ಹೀಗಾಗಿ ಮೂಗಿಗೆ ನಿಂಬೆ ಹಣ್ಣಿನ ರಸ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಲಿಂಬೆ ರಸ ಮೂಗಿ ಹಾಕಿಕೊಳ್ಳುತ್ತಿದ್ದಂತೆ ತೀವ್ರ ಒದ್ದಾಟದಿಂದ ಮೃತಪಟ್ಟನೆಂದು ಕುಟುಂಬದ ಮೂಲಗಳು ತಿಳಿಸಿವೆ.