ಭಾರತದ ಈಶಾನ್ಯ ರಾಜ್ಯವಾದ ನಾಗಾಲ್ಯಾಂಡ್ ಸ್ಥಳೀಯವಾಗಿ ಬೆಳೆಯುವ ಹಣ್ಣುಗಳಿಗೆ ಹೆಸರುವಾಸಿಯಾಗಿದೆ. ಸ್ಥಳೀಯವಾಗಿ ಬೆಳೆಯುವ ವಿಲಕ್ಷಣ ಹಣ್ಣುಗಳು ಅತ್ಯಂತ ರುಚಿಯಾಗಿದ್ದು ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಆಕರ್ಷಿಸುತ್ತವೆ ಮತ್ತು ರೈತರನ್ನು ಸಬಲೀಕರಣಗೊಳಿಸುತ್ತವೆ.
2019 ರಲ್ಲಿ ಪ್ರಾರಂಭವಾದ ‘ಟ್ರೀಸ್ ಫಾರ್ ವೆಲ್ತ್’ ನ ಮಹತ್ವಾಕಾಂಕ್ಷೆಯ ಮಿಷನ್ ಅಡಿಯಲ್ಲಿ, ನಾಗಾಲ್ಯಾಂಡ್ನ ಎನ್ಜಿಒ ‘ದ ಎಂಟಪ್ರ್ಯೂನರ್ಸ್ ಅಸೋಸಿಯೇಟ್ಸ್ ‘(ಟಿಇಎ) ರಾಜ್ಯವನ್ನು ‘ಫ್ರೂಟ್ ಹಬ್ ಆಫ್ ಇಂಡಿಯಾ’ ಆಗಿ ಪರಿವರ್ತಿಸಲು ಪಣ ತೊಟ್ಟಿದೆ. ಇದು 2025 ರ ವೇಳೆಗೆ 2 ಮಿಲಿಯನ್ ಹಣ್ಣಿನ ಮರಗಳನ್ನು ನೆಡುವ ಗುರಿಯನ್ನು ಹೊಂದಿದೆ. ಈ ಮೂಲಕ 10,000 ರೈತರನ್ನು ಸಬಲೀಕರಣಗೊಳಿಸುತ್ತದೆ ಮತ್ತು ರಾಜ್ಯದಾದ್ಯಂತ 200 ಹಳ್ಳಿಗಳ ಮೇಲೆ ಪರಿಣಾಮ ಬೀರುತ್ತದೆ. ಈಶಾನ್ಯ ರಾಜ್ಯಗಳು ಹಣ್ಣಿನ ಮರಗಳನ್ನು ನೆಡುವ ಮೂಲಕ ತಮ್ಮ ಆದಾಯವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು ಮತ್ತು ಆ ಮೂಲಕ ಪ್ರದೇಶದ ಸಮೃದ್ಧ ಜೀವವೈವಿಧ್ಯತೆಯನ್ನು ಬಳಸಿಕೊಳ್ಳಬಹುದು ಎಂದು ಎನ್ಜಿಒ ಅಭಿಪ್ರಾಯಪಟ್ಟಿದೆ.
ಪ್ರದೇಶದ ಹೆಚ್ಚಿನ ಜನಾಂಗೀಯ ಸಮುದಾಯಗಳು ವಿಭಜಿತ ಭೂಮಿ ಹಿಡುವಳಿ ಹೊಂದಿರುವುದರಿಂದ, ವ್ಯಕ್ತಿಗಳು ಹಣ್ಣಿನ ಮರಗಳ ಕೃಷಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲವಾಗಿರುವುದರಿಂದ, ಸಾಮೂಹಿಕವಾಗಿ ಮರಗಳನ್ನು ಬೆಳೆಯಲಾಗುತ್ತದೆ. ಇದಕ್ಕಾಗಿ ಟಿಇಎ “ಮೈಕ್ರೋ ಬೈ ಒನ್, ವಾಲ್ಯೂಮ್ ಬೈ ಮಾಸ್” ಮಾದರಿಯನ್ನು ಆವಿಷ್ಕರಿಸಿದೆ. ಇಲ್ಲಿ 1 ಮಿಲಿಯನ್ ರೈತರು ತಲಾ 100 ಹಣ್ಣಿನ ಮರಗಳನ್ನು ನೆಡುವ ಕಲ್ಪನೆಯಿದೆ. ಇದು 10 ಕೋಟಿ ಹಣ್ಣಿನ ಮರಗಳನ್ನು ಮಾಡುತ್ತದೆ. ಈ ಪ್ರಯತ್ನದಿಂದ ಬರುವ ಆದಾಯವು ವ್ಯಕ್ತಿಗಳನ್ನು ಸರಾಸರಿ 1,000 ಅಂತಹ ಮರಗಳನ್ನು ನೆಡಲು ಪ್ರೇರೇಪಿಸಿದರೆ, 1,000 ಮರಗಳನ್ನು ನೆಟ್ಟ 1 ಮಿಲಿಯನ್ ಜನರು ಅದನ್ನು 100 ಕೋಟಿ ಹಣ್ಣಿನ ಮರಗಳಾಗಿ ಪರಿವರ್ತಿಸುತ್ತಾರೆ. ಒಂದು ಹಣ್ಣಿನ ಮರದಿಂದ ವರ್ಷಕ್ಕೆ ರೂ 1,000 ಉತ್ಪಾದಿಸುವ ಮೂಲಕ ಆರ್ಥಿಕತೆಗೆ 1 ಟ್ರಿಲಿಯನ್ ರೂಪಾಯಿಗಳನ್ನು ಸೇರಿಸಲು ಇದು ಪ್ರದೇಶವನ್ನು ಪ್ರೇರೇಪಿಸುತ್ತದೆ.
ಆಂದೋಲನ ಆರಂಭವಾದಾಗಿನಿಂದ ಇಲ್ಲಿಯವರೆಗೆ 4.6 ಲಕ್ಷ ಹಣ್ಣಿನ ಗಿಡಗಳನ್ನು ನೆಡಲಾಗಿದೆ. 2023 ರ ವೇಳೆಗೆ ಹೆಚ್ಚುವರಿಯಾಗಿ 5 ಲಕ್ಷ ಮರಗಳನ್ನು ಬೆಳೆಸುವ ಗುರಿ ಹೊಂದಿದೆ. ಆಂದೋಲನವು ಲಾಜಿಸ್ಟಿಕ್ಸ್, ಕೋಲ್ಡ್ ಸ್ಟೋರೇಜ್ ಮತ್ತು ಆಹಾರ ಸಂಸ್ಕರಣಾ ಉದ್ಯಮಗಳಲ್ಲಿ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಈ ಪ್ರದೇಶದಲ್ಲಿ 5 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
1 ಶತಕೋಟಿ ಹಣ್ಣಿನ ಮರಗಳನ್ನು ನೆಡುವುದು ಹವಾಮಾನ ಬದಲಾವಣೆಯನ್ನು ಹಿಮ್ಮೆಟ್ಟಿಸಲು ಮತ್ತು ನಮ್ಮ ಪರಿಸರವನ್ನು ಪುನಃಸ್ಥಾಪಿಸಲು ನಮ್ಮ ಸಣ್ಣ ಕೊಡುಗೆಯಾಗಿದೆ. ಟ್ರೀಸ್ ಫಾರ್ ವೆಲ್ತ್ ಆಂದೋಲನವನ್ನು ಆವಿಷ್ಕರಿಸಿದ್ದೇಕೆಂದರೆ ಯಾವುದೇ ಮರವನ್ನು ನೆಡುವುದಕ್ಕಿಂತ ಭಿನ್ನವಾಗಿ, ಹಣ್ಣಿನ ಮರಗಳನ್ನು ನೆಡುವುದರಿಂದ ರೈತರಿಗೆ ನಗದು ಆದಾಯವನ್ನು ನೀಡುತ್ತದೆ, ಇದು ಅವರ ಮಕ್ಕಳ ಶಿಕ್ಷಣವನ್ನು ಸುಗಮಗೊಳಿಸುತ್ತದೆ ಮತ್ತು ಹಳ್ಳಿಗಳಲ್ಲಿನ ಜನರಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ ಎಂದು ದ ಎಂಟಪ್ರ್ಯೂನರ್ಸ್ ಅಸೋಸಿಯೇಶನ್ ನ ಸಿಇಒ ನೈಚುಟ್ ಡೌಲೊ ಅಸ್ಸಾಂಬಾರ್ತಾ ಗೆ ತಿಳಿಸಿದ್ದಾರೆ.
ಶಾಲೆ ಬಿಟ್ಟಿರುವ ಫೆಕ್ ಜಿಲ್ಲೆಯ ಥೆಜೊಜೊ ಕೆಜೊ ಇದೀಗ ಈ ಆಂದೋಲನದಲ್ಲಿ ಕೈಜೋಡಿಸಿದ್ದು, ಹಣ್ಣಿನ ಮರದ ಸಸಿಗಳನ್ನು ಮಾರಾಟ ಮಾಡಿ ವಾರ್ಷಿಕ ಸುಮಾರು ರೂ 2 ಲಕ್ಷ ಗಳಿಸುತ್ತಿದ್ದಾರೆ. ಹಣ್ಣಿನ ಮರಗಳನ್ನು ಬೆಳೆದು ಪರಿಸರ ಸಂರಕ್ಷಣೆ ಮತ್ತು ಆದಾಯವನ್ನು ಗಳಿಸುತ್ತಿರುವ ನೈಚುಟ್ ಡೌಲೊ ಬೇರೆ ರಾಜ್ಯಗಳಿಗೂ ತಮ್ಮ ಜ್ಞಾನವನ್ನು ವಿಸ್ತರಿಸಲು ತಯಾರಾಗಿದ್ದಾರೆ. ಇದಕ್ಕಾಗಿ ಅವರು ಆಯಾ ರಾಜ್ಯದ ಸರಕಾರಗಳು ಮತ್ತು ಸರಕಾರೇತರ ಸಂಸ್ಥೆಗಳೊಂದಿಗೆ ಪಾಲುದಾರಿಕೆ ನಡೆಸಲು ಉತ್ಸುಕರಾಗಿದ್ದಾರೆ.