ಮುಂಬೈ: ಭಾರತದಲ್ಲಿ ಕಾರು ತಯಾರಿಕಾ ಕಂಪೆನಿಗಳ ಪೈಕಿ ಟಾಟಾ ಮೋಟಾರ್ಸ್‌ಗೆ ಅಗ್ರಸ್ಥಾನವಿದೆ. ಟಾಟಾ ಕಾರುಗಳ ಪೈಕಿ ನೆಕ್ಸಾನ್ ಮಾರಾಟದಲ್ಲಿ ದಾಖಲೆ ಬರೆದಿದ್ದು, ಇದೀಗ ನೆಕ್ಸಾನ್ ಕಾರಿನಲ್ಲಿ ಮತ್ತೊಂದು ವೇರಿಯೆಂಟ್ ಬಿಡುಗಡೆಯಾಗಿದೆ. ಟಾಟಾ ನೆಕ್ಸಾನ್ XM (S) ವೇರಿಯೆಂಟ್ ಕಾರು ಮಾರುಕಟ್ಟೆ ಪ್ರವೇಶಿಸಿದೆ.
ಭಾರತದಲ್ಲಿ ಲಭ್ಯವಿರುವ ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸನ್ ರೂಫ್ ಫೀಚರ್ಸ್ ಹೊಂದಿದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೂತನ ಟಾಟಾ ನೆಕ್ಸಾನ್ XM (S) ವೇರಿಯೆಂಟ್ ಕಾರಿನ ಬೆಲೆ 8.36 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ.
ಟಾಟಾ ನೆಕ್ಸಾನ್XM S ಮಾನ್ಯುಯೆಲ್ ಪೆಟ್ರೋಲ್ ಕಾರು = 8.36 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಟಾಟಾ ನೆಕ್ಸಾನ್XM S(AMT) ಪೆಟ್ರೋಲ್ ಕಾರು = 8.96 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಟಾಟಾ ನೆಕ್ಸಾನ್XM S ಮಾನ್ಯುಯೆಲ್ ಡೀಸೆಲ್ ಕಾರು = 9.70 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಟಾಟಾ ನೆಕ್ಸಾನ್XM S(AMT) ಡೀಸೆಲ್ ಕಾರು = 10.30 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)