ಜ. 12 ರಿಂದ 14 ರ ವರೆಗೆ ‘ತಪೋವನ ಸ್ವಾಸ್ಥ್ಯ ರಕ್ಷಣಂ’- ಮೂರು ದಿನಗಳ ಆರೋಗ್ಯ ಹಬ್ಬ…

ಮಣಿಪಾಲ: ತಪೋವನ ವತಿಯಿಂದ ಜ. 12 ರಿಂದ 14 ರ ವರೆಗೆ ಇಲ್ಲಿನ ಆದರ್ಶನಗರದ ಪ್ರಗತಿ ಪ್ರೈಡ್ ನಲ್ಲಿ ‘ತಪೋವನ ಸ್ವಾಸ್ಥ್ಯ ರಕ್ಷಣಂ’- ಮೂರು ದಿನಗಳ ಆರೋಗ್ಯ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ವಿನೂತನ ಕಾರ್ಯಕ್ರಮದಲ್ಲಿ ಆಯೋಗ್ಯಕ್ಕೆ ಸಂಬಂಧಪಟ್ಟ ವೈದ್ಯಕೀಯ ಜ್ಯೋತಿಷ್ಯಾಸ್ತ್ರ, ಮನೆ ಮದ್ದು, ಆರೋಗ್ಯ ಮತ್ತು ಸ್ವಯಂ ಕಾಳಜಿ, ಒತ್ತಡ ನಿರ್ವಹಣೆ, ಧ್ವನಿ ಚಿಕಿತ್ಸೆ ಮುಂತಾದವುಗಳ ಬಗ್ಗೆ ಕಾರ್ಯಾಗಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು.

ಕನ್ನಡ ಸಾಹಿತ್ಯ ಮತ್ತು ಪಾಕಶಾಸ್ತ್ರ ಹಾಗೂ ಆರೋಗ್ಯ ಪ್ರವಾಸದ ಬಗ್ಗೆ ಪ್ಯಾನಲ್ ಚರ್ಚೆ ಮತ್ತು ಸಂವಾದ ಕಾರ್ಯಕ್ರಮ ಜರುಗಲಿರುವುದು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಂಸ ದಿಗ್ವಿಜಯ ಮತ್ತು ಇಂದ್ರಜಿತ್ ಕಾಳಗ ಬಯಲಾಟ ನಡೆಯಲಿರುವುದು.

ಕಾರ್ಯಕ್ರಮದಲ್ಲಿ ಮಳಿಗೆಗಳು, ಆಹಾರ ಟ್ರಕ್, ವೈದ್ಯರ ಸಮಾಲೋಚನೆ ಮತ್ತು ಹಲವು ವಿಷಯಗಳು ಇರಲಿವೆ.

ಮಾಹಿತಿಗಾಗಿ: 8792515826