ಮಂಗಳೂರು: ಟ್ಯಾಂಕರ್ ಹಾಗೂ ಜೀಪು ನಡುವೆ ಅಪಘಾತ ಉಂಟಾಗಿ ಜೀಪು ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪದ ನೀರಕಟ್ಟೆ ಬಳಿ ಮಂಗಳವಾರ ಸಂಭವಿಸಿದೆ.
ಉಪ್ಪಿನಂಗಡಿಯಿಂದ ನೆಲ್ಯಾಡಿಗೆ ಹೋಗುತ್ತಿದ್ದ ಜೀಪು ಹಾಗೂ ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಆಯಿಲ್ ಸಾಗಾಟದ ಮಿನಿ ಟ್ಯಾಂಕರ್ ಢಿಕ್ಕಿಯಾಗಿವೆ.
ಢಿಕ್ಕಿಯಾದ ರಭಸಕ್ಕೆ ಜೀಪು ಕಿರು ಸೇತುವೆಗೆ ಉರುಳಿದೆ.
ಗಂಭೀರವಾಗಿ ಗಾಯಗೊಂಡ ಜೀಪು ಚಾಲಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.