ಚೆನ್ನೈ: ತಮಿಳಿನ ಖ್ಯಾತ ಹಾಸ್ಯನಟ ವಿವೇಕ್ ಅವರಿಗೆ ಹೃದಯಾಘಾತವಾಗಿದ್ದು, ಅವರಿಗೆ ಚೆನ್ನೈನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಇಂದು ಬೆಳಿಗ್ಗೆ ಅವರು ಧಿಡೀರ್ ಆಗಿ ಹೃದಯಾಘಾತಕ್ಕೆ ಒಳಗಾಗಿ ಮೂರ್ಛೆ ಹೋಗಿದ್ದರು. ತಕ್ಷಣವೇ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಿನ್ನೆಯಷ್ಟೇ ಕೋವಿಡ್ ಲಸಿಕೆ ಪಡೆದಿದ್ದ ವಿವೇಕ್:
ವಿವೇಕ್ ಗುರುವಾರ (ಏ.15) ಕೋವಿಡ್ ಲಸಿಕೆ ಪಡೆದಿದ್ದರು. ಬಳಿಕ ಅರ್ಹರಾದ ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಸಂದೇಶವನ್ನೂ ನೀಡಿದ್ದರು. ಕೋವಿಡ್ ಲಸಿಕೆ ಪಡೆದದ್ದಕ್ಕೂ ಹೃದಯಾಘಾತ ಸಂಭವಿಸಿದ್ದಕ್ಕೂ ಸಂಬಂಧವಿಲ್ಲ ಎಂದು ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ.