ಚೆನ್ನೈ: ಶಿವಕಾರ್ತಿಕೇಯನ್ ಅಭಿನಯದ ಮರೀನಾ ಚಿತ್ರದಲ್ಲಿ ಅಭಿನಯಿಸಿ ಖ್ಯಾತನಾಮರಾಗಿದ್ದ ತಮಿಳು ನಟ ಥೆನ್ನರಸು ಮಂಗಳವಾರ ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಾಂಡಿರಾಜ್ ನಿರ್ದೇಶನದ “ಮರೀನಾ” ಚಿತ್ರದಲ್ಲಿ ಥೆನ್ನರಸು ಶಿವಕಾರ್ತಿಕೇಯನ್ ಅವರ ಸ್ನೇಹಿತನ ಪಾತ್ರದಲ್ಲಿ ನಟಿಸಿದ್ದರು. ಹಲವಾರು ತಮಿಳು ಚಿತ್ರಗಳಲ್ಲಿ ನಾಯಕನ ಗೆಳೆಯನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ, ಆದರೆ ಮರೀನಾ ಚಿತ್ರದ ವೃತ್ತಿಬದುಕಿನಲ್ಲಿ ದೊಡ್ಡ ಬ್ರೇಕ್ ಸಿಕ್ಕಿರಲಿಲ್ಲ.
ಮೂರು ವರ್ಷಗಳ ಹಿಂದೆ ಗೆಳತಿಯೊಂದಿಗೆ ವಿವಾಹವಾಗಿದ್ದ ಥೆನ್ನರಸು ದಂಪತಿಗೆ ಎರಡು ವರ್ಷದ ಮಗು ಇದೆ. ಈಚೆಗೆ ಮದ್ಯದ ಚಟಕ್ಕೆ ಬಿದ್ದಿದ್ದ ನಟ ಪತ್ನಿಯೊಂದಿಗೆ ಆಗಾಗ ಜಗಳಕ್ಕೆ ಇಳಿಯುತ್ತಿದ್ದನು ಎನ್ನಲಾಗಿದೆ. ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ ಎಂದು ಹೇಳಲಾಗುತ್ತಿದೆ.
ಇದೀಗ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡ ಪೋಲೀಸರು ಘಟನೆಯ ಹಿಂದಿನ ಕಾರಣ ತಿಳಿಯಲು ತನಿಖೆ ಕೈಗೊಂಡಿದ್ದಾರೆ.