ಖಂಬದಕೋಣೆ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಬೈಂದೂರು ತಾಲೋಕು ಘಟಕ, ಪದವಿಪೂರ್ವ ಕಾಲೇಜು ಖಂಬದಕೋಣೆ ಸಹಯೋಗದಲ್ಲಿ
ಬೈಂದೂರು ಕಸಾಪ ತಾಲೂಕು ಘಟಕದ ಅಧ್ಯಕ್ಷ ಡಾ.ರಘು ನಾಯ್ಕ್ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಯುವ-ಕವಿ ಗೋಷ್ಠಿ, ವಿದ್ಯಾರ್ಥಿ-ಕವಿ ಗೋಷ್ಠಿ ಜರಗಿತು.
ಖಂಬದಕೋಣೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣಪತಿ ಅವಭ್ರತ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಕೋರಿದರು.
ಕಾಲೇಜಿನ ಕನ್ನಡ ಉಪನ್ಯಾಸಕ ಸುಧೀರ್ ದೇವಾಡಿಗರು ಮತ್ತು ಕಸಾಪ ಬೈಂದೂರು ಘಟಕದ ಸದಸ್ಯ,ಕಾರ್ಯಕ್ರಮದ ಸಂಘಟಕರೂ ಆದ ಕೆ.ಪುಂಡಲೀಕ ನಾಯಕರು ಆಶಯ ನುಡಿಗಳನ್ನಾಡಿದರು.
ಪ್ರಭಾರ ಉಪ ಪ್ರಾಂಶುಪಾಲ ಸತ್ಯನಾರಾಯಣ ಜಿ, ಕಸಾಪ ಬೈಂದೂರು ಘಟಕದ ಸದಸ್ಯ ಗೋವಿಂದ ಬಿಲ್ಲವ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸುಖೇಶ್ ಶೆಟ್ಟಿ, ಹೈಸ್ಕೂಲ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅರುಣ ಹೆಬ್ಬಾರ್ ಸಂದರ್ಭೋಚಿತ ಮಾತುಗಳೊಂದಿಗೆ ಕಾರ್ಯಕ್ರಮಕ್ಕೆ ಶುಭಕೋರಿದರು.
ನಂತರ ಬೈಂದೂರಿನ ಪ್ರವೀಣ ಬಿ ಶೆಟ್ಟಿ, ಬರಹಗಾರರು, ಸಂಗೀತ ನಿರ್ದೇಶಕರು, ಸಾಪ್ಟ್’ವೇರ್ ಆರ್ಕಿಟೆಕ್ಟ್ – ಒರಾಕಲ್ ಕಾರ್ಪೊರೇಷನ್ ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರಗಿತು.
ಉದಯೋನ್ಮುಖ ಕವಿಗಳಾದ ಕಾಲೇಜಿನ ಶಿಕ್ಷಕಿ ಸುಜಾತಾ, ಜಗದೀಶ ದೇವಾಡಿಗ ಉಪ್ಪುಂದ, ಶರತ್ ಶೆಟ್ಟಿ ಬಿಜೂರು, ಪವಿತ್ರ ಎನ್ ಮೊಗೇರಿ, ನಾಗರತ್ನ ಮೊಗೇರಿ, ಮರವಂತೆ ಮಹಾಬಲ ಕೆ, ಮಂಜುನಾಥ ಮರವಂತೆ, ಸುಶೀಲಾ, ಲೋಲಾಕ್ಷಿ, ಅನಿತಾ ಅರ್.ಕೆ, ಸುನೀತಾ, ನಾಗವೇಣಿ ಪ್ರಭಾಕರ್ ಮರವಂತೆ ಭಾಗವಹಿಸಿದರು.
ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ಮನೀಷ್ ಮದ್ದೋಡಿ, ಸ.ಪ್ರ.ದ.ಕಾಲೇಜು ಬೈಂದೂರು, ಖಂಬದಕೋಣೆ ಪ.ಪೂ ಕಾಲೇಜಿನ ಕುಮಾರಿ ಶರಣ್ಯ ಮತ್ತು ಶ್ರುತಿ, ಪ್ರೌಢಶಾಲಾ ವಿಭಾಗದ ಸಂಜೀತಾ, ಚೈತನ್ಯ, ಪೂರ್ಣಿಮಾ, ಪ್ರತಿಕ್ಷಿತ, ಶ್ರೀನಿಧಿ, ಶರಣ್ಯ, ದೀಕ್ಷಾ, ಅನನ್ಯಾ ಇವರು ಸ್ವರಚಿತ ವಿಭಿನ್ನ, ಅರ್ಥಪೂರ್ಣ, ಮಾರ್ಮಿಕವಾದ ಕವನಗಳನ್ನು ವಾಚಿಸಿ ಸಾಹಿತ್ಯಾಸಕ್ತರನ್ನು ರಂಜಿಸಿದರು.
ಬಳಿಕ ಕವನ ವಾಚನ ಆಲಿಸಿದ ಗೋಷ್ಠಿಯ ಅಧ್ಯಕ್ಷರು ಕವನಗಳನ್ನು ಉಲ್ಲೇಖಿಸಿ ಪ್ರೇರಣಾತ್ಮಕ ನುಡಿಗಳೊಂದಿಗೆ ಕವಿಮನಸುಗಳನ್ನು ಹುರಿದುಂಬಿಸಿದರು.
ಅಧ್ಯಕ್ಷ ಡಾ.ರಘು ನಾಯ್ಕ ಅವರು ಕವಿಗಳಿಗೆ ಕನ್ನಡ ಶಾಲು ಗೌರವದೊಂದಿಗೆ ಪ್ರಮಾಣಪತ್ರ ವಿತರಿಸಿದರು.
ಶಿಕ್ಷಕರಾದ ವಿಶ್ವನಾಥ ಶೆಟ್ಟ ಪಂಪ ಕುವೆಂಪು, ಹಳೆಗನ್ನಡ ನಡುಗನ್ನಡ, ನವ್ಯದ ಕನ್ನಡ ನುಡಿ ಭಂಡಾರದೊಂದಿಗೆ ನುಡಿ ಸಡಗರಕ್ಕೆ ನಿಜಾರ್ಥ ನೀಡಿ ನಿರೂಪಿಸಿದರು.