ಭಕ್ತರ ಇಷ್ಟಾರ್ಥ ಈಡೇರಿಸುವ ನಂಬಿಕೆಯ ಬೆಳಕು “ಜಗನ್ಮಾತೆ ಕಟೀಲಮ್ಮ” ಭಕ್ತಿ ಸ್ತುತಿ ಯೂಟ್ಯೂಬ್ ನಲ್ಲಿ ಬಿಡುಗಡೆ

ಮಹಾದೇವಿ ಸರ್ವೇಶ್ವರಿಯಾಗಿ ಸದಾ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ನಂಬಿಕೆಯ ಬೆಳಕಾಗಿ ಕಾಯುವಜಗನ್ಮಾತೆ ಕಟೀಲಮ್ಮನ ಭಕ್ತಿ ಸ್ತುತಿಯು ಸುಪ್ರೀತಾ ಆಚಾರ್ಯ ಅವರ ಸುಮಧುರ ಕಂಠದಲ್ಲಿ ಮೂಡಿಬಂದಿದೆ.ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಭಕ್ತಿ ಸ್ತುತಿಯು ಜನರನ್ನು ಭಾವಪರವಶರನ್ನಾಗಿಸುತ್ತಿದೆ. ಪಿಎಸ್ ಕ್ರಿಯೇಶನ್ ಸಾರಥ್ಯದಲ್ಲಿ ವಿಡಿಯೋ ಮನಮೋಹಕವಾಗಿ ಮೂಡಿಬಂದಿದೆ. ನಿರ್ಮಾಣ: ಪರ್ಫೆಕ್ಟ್ ಪಿಕ್ಚರ್ ಫೊಟೋಗ್ರಫಿ ಬೈಲೂರು ಸಹಕಾರ-ಸಂಕಲನ-ಪ್ರಚಾರಕಲೆ: ಪ್ರಸಾದ್ ಅಚಾರ್ಯ ಬೈಲೂರು ಸಾಹಿತ್ಯ: ಉಮಾನಾಥ್ ಕೋಟ್ಯಾನ್ ತೆಂಕಕಾರಂದೂರು
ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸ್ವಾಮಿಯ ಮಹಿಮೆ ಸಾರುವ ‘ನನ್ನೊಡೆಯಾ ನೀನು’ ಭಕ್ತಿ ಗೀತೆ ಯೂಟ್ಯೂಬ್ ನಲ್ಲಿ ಬಿಡುಗಡೆ

ಕುಂದಾಪುರ: ಸುಪ್ರಸಿದ್ದ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸ್ವಾಮಿಯ ಕುರಿತು ರಚಿತವಾದ “ನನ್ನೊಡೆಯಾ ನೀನು” ಎಂಬ ಭಕ್ತಿ ಪ್ರಧಾನ ಗೀತೆಯು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಆರಾಧ್ಯ ಕ್ರಿಯೇಷನ್ಸ್ ಹಾಗೂ ಸ್ಪೆಕ್ಟ್ರಮ್ ವಿಜುವಲ್ಸ್ ಅವರ ಸಹಭಾಗಿತ್ವದಲ್ಲಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸ್ವಾಮಿಯ ಕುರಿತು ರಚಿತವಾದ “ನನ್ನೊಡೆಯಾ ನೀನು” ಭಕ್ತಿ ಪ್ರಧಾನ ಗೀತೆಯು ಕ್ಷೇತ್ರದ ಇತಿಹಾಸ ಸಾರುವ ಈ ಗೀತೆಯು ಹಿಂದೆಂದೂ ಕಂಡಿರದ ವಿಷಯಗಳಲ್ಲಿ ವಿಷೇಶತೆಯನ್ನೊಳಗೊಂಡಿದೆ. ನಿರ್ದೇಶನ: ಶಶಾಂಕ್ ಆಚಾರ್ಯ ವಂಡ್ಸೆ ಸಾಹಿತ್ಯ ಮತ್ತು ಸಂಯೋಜನೆ: ಸಂತೋಷ್ ಕುಂದಾಪುರ ಸಂಗೀತ: ರಾಜೇಶ್ ಭಟ್ […]
ಯೂಟ್ಯೂಬ್ ನಲ್ಲಿ ಬಿಡುಗಡೆಯಾಯ್ತು ಗಗನ್ ಗಾಂವ್ಕರ್ ಸುಮಧುರ ಕಂಠದಲ್ಲಿ ಸಿಂಗಾರ ಸಿರಿಯೆ ತುಳು ಆವೃತ್ತಿ

ವಿಶ್ವದಾದ್ಯಂತ ಕಿಚ್ಚು ಹಚ್ಚಿದ ಕಾಂತಾರ ಚಿತ್ರದ ಸಿಂಗಾರ ಸಿರಿಯೆ ಗೀತೆಯನ್ನು ಮೆಚ್ಚದವರೇ ಇಲ್ಲ. ಇದೀಗ ಸಿಂಗಾರ ಸಿರಿಯೆ ಹಾಡಿನ ತುಳು ಆವೃತ್ತಿಯು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರತಾಪ್ ಶೆಟ್ಟಿ ಸಾಹಿತ್ಯದ ಗೀತೆಯನ್ನು ಝೀಟಿವಿಯ ಸರೆಗಮಪ ಸಂಗೀತ ರಿಯಾಲಿಟಿ ಶೋ ವಿಜೇತ ಗಗನ್ ಗಾಂವ್ಕರ್ ಸುಶ್ರಾವ್ಯವಾಗಿ ಹಾಡಿದ್ದಾರೆ. ಹಾಡಿನ ಮಿಕ್ಸಿಂಗ್ ಅನ್ನು ಉಡುಪಿಯ ನಿನಾದ್ ಆಡಿಯೋ ರೆಕಾರ್ಡಿಂಗ್ ಮಿಕ್ಸಿಂಗ್ ಸ್ಟುಡಿಯೋನ ಶರತ್ ಉಚ್ಚಿಲ ಮಾಡಿದ್ದಾರೆ.
ಯೂಟ್ಯೂಬ್ ನಲ್ಲಿ ಕಚಗುಳಿಯಿಡುತ್ತಿದ್ದಾನೆ ಮಿ.ಕೋದಂಡ! ಭರ್ಗ ಸಿನಿಮಾಸ್ ರವರ ಕಿರುಚಿತ್ರದ ಎಪಿಸೋಡ್1 ಬಿಡುಗಡೆ

ಯೂಟ್ಯೂಬ್ ಚಾನೆಲ್ ನಲ್ಲಿ ಭರ್ಗ ಸಿನಿಮಾಸ್ ರವರ ಕಿರುಚಿತ್ರ ಮಿ.ಕೋದಂಡ ಬಿಡುಗಡೆಯಾಗಿದೆ. ಸುಮಂತ್ ಆಚಾರ್ಯ ಚಿತ್ರಕಥೆ ಮತ್ತು ನಿರ್ದೇಶನದ ಈ ಕಿರುಚಿತ್ರವನ್ನು ವಿಜಯ್ ನಿರ್ಮಾಣ ಮಾಡಿದ್ದಾರೆ. ಮುಖ್ಯ ತಾರಾಗಣದಲ್ಲಿ ಪ್ರತೀಕ್ ಶೆಟ್ಟಿ ಮತ್ತು ದೀಪಿಕಾ ಗೌಡ ನಟಿಸಿದ್ದಾರೆ. ಇವರಿಗೆ ದಿವ್ಯ ಅಂಚನ್, ಕೃಷ್ಣ ಶೆಂದ್ರೆ ರಾಘು ರಾಮನಕೊಪ್ಪ, ಮಧು ಭಾರದ್ವಾಜ, ಸಿದ್ದು ಮಂಡ್ಯ ಜೊತೆಯಾಗಿದ್ದಾರೆ. ಯಶವಂತ್ ಆರ್ಯ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ರಾಜ್ ಪ್ರವೀಣ್ ಅವರ ಪರಿಕಲ್ಪನೆಯಲ್ಲಿ ಚಿತ್ರ ಮೂಡಿಬಂದಿದ್ದು ಯೂಟ್ಯೂಬ್ ನಲ್ಲಿ ಮೊದಲನೆ ಎಪಿಸೋಡ್ ಜನರನ್ನು […]