ಗೆಳೆಯನ ಮನೆಯಲ್ಲಿ ಯುವತಿ ಆತ್ಮಹತ್ಯೆಗೆ ಶರಣು

ತಿರುವನಂತಪುರಂ: ಗೆಳೆಯನ ಮನೆಗೆ ತೆರಳಿ ಯುವತಿಯೊಬ್ಬಳು ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ಮೃತಳನ್ನು ಅಂಬಾಲ್ಲೂರು ನಿವಾಸಿ ಸೂರ್ಯ(26) ಎಂದು ಗುರುತಿಸಲಾಗಿದೆ. ಗೆಳೆಯ ಅಶೋಕ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮ್ಮ ಮನೆಗೆ ಬಂದ ಸೂರ್ಯ ಕೋಣೆಯ ಬಾಗಿಲನ್ನು ಏಕಾಏಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗೆಳೆಯ ಅಶೋಕ್ ಹಾಗೂ ಆತನ ಪೋಷಕರು ತಿಳಿಸಿದ್ದಾರೆ. ಸೂರ್ಯ ಧರಿಸಿದ್ದ ಶಾಲನ್ನು ಫ್ಯಾನಿಗೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮುಲಾಂತುರುತಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ […]