ದಿ. ಜೋಸೆಫ್-ಮೇರಿ ಪಿಂಟೊ ನಿಡ್ಡೋಡಿ ಸ್ಮಾರಕ ಸಾಹಿತ್ಯ ಪುರಸ್ಕಾರಕ್ಕೆ ಯುವ ಲೇಖಕಿ ಮುದ್ದು ತೀರ್ಥಹಳ್ಳಿ ಆಯ್ಕೆ

ಉಡುಪಿ: ಕೊಂಕಣಿಯಲ್ಲಿ ಬರೆಯುವ ಯುವ ಸಾಹಿತಿಗಳಿಗೆ ಕಥೊಲಿಕ್‌ ಸಭಾ ಉಡುಪಿ ಪ್ರದೇಶ ಇವರ ಸಹಭಾಗಿತ್ವದಲ್ಲಿ ನೀಡಲಾಗುವ ದಿ. ಜೋಸೆಫ್‌ ಮತ್ತು ಮೇರಿ ಪಿಂಟೊ ನಿಡ್ಡೋಡಿ ಸ್ಮಾರಕ ಸಾಹಿತ್ಯ ಪುರಸ್ಕಾರ -2021ಕ್ಕೆ ವಿತಾಶಾ ರಿಯಾ ರೊಡ್ರಿಗಸ್‌ (ಮುದ್ದು ತೀರ್ಥಹಳ್ಳಿ) ಅವರು ಆಯ್ಕೆಯಾಗಿದ್ದಾರೆ. ವಿತಾಶಾ ರಿಯಾ ರೊಡ್ರಿಗಸ್‌ ತಮ್ಮ ಕಾವ್ಯ ನಾಮ ಮುದ್ದು ತೀರ್ಥಹಳ್ಳಿ ಹೆಸರಿನಲ್ಲಿ ಕಳೆದ ಏಳು ವರ್ಷಗಳಿಂದ ಕೊಂಕಣಿ ಹಾಗೂ ಕನ್ನಡ ಪತ್ರಿಕೆಗಳಲ್ಲಿ ಕಥೆ, ಕವನಗಳು ಮತ್ತು ಲೇಖನಗಳನ್ನು ಬರೆಯುತ್ತಿದ್ದು, ನಿರಂತರವಾಗಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ. ಮುದ್ದು ತೀರ್ಥಹಳ್ಳಿ […]