ರಾಮಮಂದಿರ ನಿರ್ಮಾಣಕ್ಕೆ ₹1.21 ಲಕ್ಷ ದೇಣಿಗೆ ನೀಡಿದ ಯಶ್ ಪಾಲ್ ಸುವರ್ಣ

ಉಡುಪಿ: ಅಯೋಧ್ಯಾ ಶ್ರೀರಾಮಮಂದಿರ ನಿರ್ಮಾಣಕ್ಕೆ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಅವರು ₹1.21 ಲಕ್ಷ ದೇಣಿಗೆ ನೀಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಚಾಲಕ ನಾರಾಯಣ ಶೆಣೈ, ನಗರ ಸಂಘ ಚಾಲಕ ಶ್ರೀರಾಮಚಂದ್ರ ಸನಿಲ್, ಉಡುಪಿ ನಗರ ಸಂಪರ್ಕ ಪ್ರಮುಖ್ ಶರತ್ ಮಲ್ಪೆ, ಸುಭಾಷಿತ್ ಅವರಿಗೆ ದೇಣಿಗೆಯನ್ನು ಹಸ್ತಾಂತರಿಸಿದರು.