ಕೇಂದ್ರ ಸರಕಾರದಿಂದ ಅಂಬಲಪಾಡಿ ಮತ್ತು ಸಂತೆಕಟ್ಟೆ ವಾಹನ ಮೇಲ್ಸೇತುವೆ ರಚನೆಗೆ 50 ಕೋಟಿ ಮಂಜೂರು: ಯಶ್ ಪಾಲ್ ಸುವರ್ಣ ಸ್ವಾಗತ

ಉಡುಪಿ: ಉಡುಪಿ ನಗರ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ ರಾಷ್ಟೀಯ ಹೆದ್ದಾರಿ 66 ರ ಅಂಬಲಪಾಡಿ ಮತ್ತು ಸಂತೆಕಟ್ಟೆಯ ವಾಹನ ಮೇಲ್ಸೇತುವೆ ನಿರ್ಮಾಣಕ್ಕೆ 50 ಕೋಟಿ ಅನುದಾನ ಮಂಜೂರು ಮಾಡಿದ ಕೇಂದ್ರ ಸರಕಾರದ ನಿರ್ಧಾರವನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಯಶ್ ಪಾಲ್ ಸುವರ್ಣ ಸ್ವಾಗತಿಸಿದ್ದಾರೆ. ಉಡುಪಿ ನಗರದ ಪ್ರಮುಖ ಕೂಡು ರಸ್ತೆಯಲ್ಲಿನ  ವಾಹನ ದಟ್ಟಣೆಯಿಂದ ಜನಸಾಮಾನ್ಯರು ಎದುರಿಸುತ್ತಿದ್ದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಂಬಲಪಾಡಿ  ವಾಹನ ಮೇಲ್ಸೇತುವೆ ನಿರ್ಮಾಣಕ್ಕೆ 24.56 […]