ಯಕ್ಷಗಾನ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್ ಕುಟುಂಬಕ್ಕೆ ಯಕ್ಷಗಾನ ಕಲಾರಂಗದ ವತಿಯಿಂದ ಆರ್ಥಿಕ ನೆರವು

ಉಡುಪಿ: ಕಳೆದ ವರ್ಷ ನಿಧನ ಹೊಂದಿದ ಬಡಗತಿಟ್ಟು ಯಕ್ಷಗಾನದ ಪ್ರಸಿದ್ಧ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್ ಅವರ ಕುಟುಂಬಕ್ಕೆ ಯಕ್ಷಗಾನ ಕಲಾರಂಗದ ವತಿಯಿಂದ ₹ 25 ಸಾವಿರ ಮೊತ್ತದ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ನೇಜಾರಿನಲ್ಲಿರುವ ಅವರ ಮನೆಗೆ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ತೆರಳಿ ಅಧ್ಯಕ್ಷ ಎಂ. ಗಂಗಾಧರ ರಾವ್ ನೇತೃತ್ವದ ನಿಯೋಗದಿಂದ ಸುಬ್ರಹ್ಮಣ್ಯ ಆಚಾರ್ ಅವರ ಪತ್ನಿ ಸರಸ್ವತಿ ಆಚಾರ್ ಅವರಿಗೆ ನೆರವು ಹಸ್ತಾಂತರಿಸಿತು. ಅವರ ಪುತ್ರಿ ಸೀಮಾಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಭರಿಸುತ್ತಿದೆ. […]