ಪೆರ್ಡೂರು ಮೇಳದ ಯಕ್ಷಗಾನ ಕಲಾವಿದ ನಾಪತ್ತೆ

ಉಡುಪಿ: ಬಡಗುತಿಟ್ಟನ ಪ್ರಸಿದ್ಧ ಯಕ್ಷಗಾನ ಕಲಾವಿದ ನಾಪತ್ತೆಯಾಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ಯಾಡಿ ಗುಡ್ಡೆಯಂಗಡಿ ನಿವಾಸಿ ಕಡಬಾಳ ಉದಯ ಹೆಗಡೆ (37) ನಾಪತ್ತೆಯಾದ ಕಲಾವಿದ. ಇವರು ಏಪ್ರಿಲ್ 21ರಿಂದ ಕಾಣೆಯಾಗಿದ್ದಾರೆ. ಇವರು ಪೆರ್ಡೂರು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಏಪ್ರಿಲ್ 21ರಂದು ಮನೆಯಿಂದ ಕಾರಿನಲ್ಲಿ ಹೋಗಿದ್ದರು. ಆದರೆ ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ. ಇದರಿಂದಾಗಿ ಆತಂಕಗೊಂಡಿರುವ ಉದಯ ಹೆಗಡೆ ಪತ್ನಿ ಅಶ್ವಿನಿ ಕೊಂಡದಕುಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು […]