ಕೊರೊನಾದ ಹುಟ್ಟೂರು ಚೀನಾದ ವುಹಾನ್ ನಲ್ಲಿ ಸೆ. 1ರಿಂದ ಶಾಲೆಗಳು ಆರಂಭ

ವುಹಾನ್: ಕೊರೊನಾದ ಹುಟ್ಟೂರು ಚೀನಾ ದೇಶದ ವುಹಾನ್ ನಗರದಲ್ಲಿ ಸೆ. 1ರಿಂದ ಶಾಲೆಗಳು ಆರಂಭವಾಗಲಿದೆ. ನಗರದ 2,842 ಶಾಲೆಗಳು ಏಕಕಾಲದಲ್ಲಿ ಪುನರಾರಂಭಗೊಳ್ಳಲಿದೆ. ಶಾಲೆಗಳನ್ನು ಆರಂಭಿಸುವಂತೆ ಅಲ್ಲಿನ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸೆ. 1ರಿಂದ 1.4 ಮಿಲಿಯನ್ ವಿದ್ಯಾರ್ಥಿಗಳು ಶಾಲೆಗೆ ಬರಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.