World Sight Day 2023: ಕಣ್ಣಿನ ಆರೋಗ್ಯದ ಬಗ್ಗೆ ಬೇಡ ನಿರ್ಲಕ್ಷ್ಯ, ವಿಶ್ವ ದೃಷ್ಟಿ ದಿನದ ಬಗ್ಗೆ ಇಲ್ಲಿದೆ ಮಾಹಿತಿ

ನಿಮ್ಮ ಕಣ್ಣಿನ ಆರೋಗ್ಯದ ಪ್ರಾಮುಖ್ಯತೆಯ ಕುರಿತು ಆಲೋಚಿಸಲು ಮತ್ತು ಅದನ್ನು ರಕ್ಷಿಸಲು ಮತ್ತು ಭವಿಷ್ಯದಲ್ಲಿ ಅದನ್ನು ಆರೋಗ್ಯಕರವಾಗಿಡಲು ಎಚ್ಚರಿಸುವ ಸಲುವಾಗಿ ಈ ದಿನವನ್ನು ಮೀಸಲಿಡಲಾಗಿದೆ. ವಿಶ್ವ ದೃಷ್ಟಿ ದಿನದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಹೀಗಿದೆ. ಪಂಚೇಂದ್ರೀಯಗಳಲ್ಲಿ ಕಣ್ಣು (Eye) ಪ್ರಮುಖವಾದ ಅಂಗ. ದೃಷ್ಟಿ ಇಲ್ಲದಿದ್ದರೆ ಜಗತ್ತೇ ಕತ್ತಲು. ಪ್ರಪಂಚದಾದ್ಯಂತದ ಅನೇಕ ಜನರು ವಿವಿಧ ರೀತಿಯ ದೃಷ್ಟಿ ದೋಷಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್​ ತಿಂಗಳ ಎರಡನೇ ಗುರುವಾರದಂದು […]