ವಿಶ್ವ ಪರಿಸರ ದಿನ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ಅನಾಥಾಶ್ರಮಕ್ಕೆ ತೆಂಗಿನ ಸಸಿ ವಿತರಣೆ

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್, ಉಡುಪಿ ಟೆಂಪಲ್ ಸಿಟಿ ಲೀಜನ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಜೂನ್ 04 ಶನಿವಾರದಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಲ್ಯಾಣಪುರದ “ಸ್ಪಂದನ ” ವಿಕಲ ಚೇತನರ ಅನಾಥಾಶ್ರಮಕ್ಕೆ ತೆಂಗಿನ ಸಸಿಗಳ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಉಡುಪಿ ಟೆಂಪಲ್ ಸಿಟಿ ಲೀಜನ್ ನ ಅಧ್ಯಕ್ಷ ಜಗದೀಶ ಕೆಮ್ಮಣ್ಣು, ರಾಷ್ಟ್ರೀಯ ಅಧಿಕಾರಿ ಚಿತ್ರ ಕುಮಾರ್, ವಿಜಯ್ ಕುಮಾರ್ ಉದ್ಯಾವರ, ಕಾರ್ಯದರ್ಶಿ ಸಂತೋಷ್ ಕುಮಾರ್, ಖಜಾಂಚಿ ರಾಜೇಶ್ ಆಚಾರ್ಯ, ಸರ್ವ ಸದಸ್ಯರು ಹಾಗೂ ಅನಾಥಾಶ್ರಮದ ಮುಖ್ಯಸ್ಥರು ಮತ್ತು […]

ಬ್ರಹ್ಮಾವರ: ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಇನ್ಸ್ ಟಿಟ್ಯೂಟ್ ನಲ್ಲಿ ಪರಿಸರ ದಿನಾಚರಣೆ

ಬ್ರಹ್ಮಾವರ: ಬ್ರಹ್ಮಾವರ ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಇನ್ಸ್ ಟಿಟ್ಯೂಟ್ ಸಂಸ್ಥೆಯಲ್ಲಿ, ಪರಿಸರ ದಿನಾಚರಣೆಯ ಅಂಗವಾಗಿ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಇದರ ಜೊತೆಗೆ ಪರಿಸರ ದಿನದ ಹಿನ್ನೆಲೆಯಲ್ಲಿ ರಸಪ್ರಶ್ನೆ ಮತ್ತು ತರಗತಿ ಕೊಠಡಿಯ ಅಲಂಕಾರದಂತಹ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ವಿದ್ಯಾರ್ಥಿಗಳು ತಾವೇ ಖುದ್ದಾಗಿ ನಿರ್ಮಿಸಿದ ವಸ್ತುಗಳನ್ನು ಉಪಯೋಗಿಸಿ ಕೊಠಡಿಯ ಅಲಂಕಾರ ಕೈಗೊಂಡರು. ಕಸದಿಂದ ರಸ ಅನ್ನುವ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಪರಿಸರ ಸಂರಕ್ಷಣೆಯ ಹಾದಿಯಲ್ಲಿ ಸಂಸ್ಥೆಯು ಹೆಜ್ಜೆ ಇಟ್ಟಿದ್ದು ಸಮಾಜದಲ್ಲಿ ಉತ್ತಮ ಮಾದರಿಯಾಗಿದೆ. ಈ […]

ತ್ಯಾಜ್ಯದಿಂದ ಐಶ್ವರ್ಯ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛತಾ ಜಾಥಾ

ಉಡುಪಿ: ನಗರಸಭೆ ಉಡುಪಿ ಹಾಗೂ ಸರ್ವೋದಯ ಇಂಟಿಗ್ರೇಟೆಡ್ ಟ್ರೈನಿಂಗ್ ಅಂಡ್ ರೂರಲ್ ಅಸೋಸಿಯೇಷನ್ ದಾವಣಗೆರೆ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜೂನ್ 5 ರಂದು ಬೆಳಗ್ಗೆ 7.30 ಕ್ಕೆ ತ್ಯಾಜ್ಯದಿಂದ ಐಶ್ವರ್ಯ ಎಂಬ ಘೋಷವಾಕ್ಯದೊಂದಿಗೆ ಉಡುಪಿ ನಗರಸಭೆ ಕಾರ್ಯಾಲಯದಿಂದ ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಭುಜಂಗ ಪಾರ್ಕ್ ವರೆಗೆ ಸ್ವಚ್ಛತಾ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.