ಆತ್ರಾಡಿ: ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

ಹಿರಿಯಡ್ಕ: ಕಳೆದ 20 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆತ್ರಾಡಿ ಗ್ರಾಮದ ಮದಗ ಚೆನ್ನಿಬೆಟ್ಟು ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮದಗ ಚೆನ್ನಿಬೆಟ್ಟು ನಿವಾಸಿ ಲಲಿತಾ ಶೇರಿಗಾರ್ತಿ (65) ಎಂದು ಗುರುತಿಸಲಾಗಿದೆ. ಲಲಿತಾ ಕಳೆದ 20 ವರ್ಷದಿಂದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ, 2 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಇದೇ ಖಿನ್ನತೆಯಲ್ಲಿ ಇಂದು ಬೆಳಿಗ್ಗೆ 9ರಿಂದ 11 ಗಂಟೆಯ ಮಧ್ಯೆ ಅವಧಿಯಲ್ಲಿ ಮನೆಯ […]