ರಬಿ ಋತುವಿನಲ್ಲಿ 187 ಲಕ್ಷ ಮೆಟ್ರಿಕ್ ಟನ್ ಗೋಧಿ, 860 ಲಕ್ಷ ಮೆಟ್ರಿಕ್ ಟನ್ ಭತ್ತ ಸಂಗ್ರಹಿಸಿದ ಸರಕಾರ

ನವದೆಹಲಿ: ರಬಿ ಮಾರುಕಟ್ಟೆ ಋತು 2022-23 ರಲ್ಲಿ ಸರಕಾರವು ಇದುವರೆಗೆ 187 ಲಕ್ಷ 86 ಸಾವಿರ ಮೆಟ್ರಿಕ್ ಟನ್ ಗೋಧಿಯನ್ನು ಸಂಗ್ರಹಿಸಿದೆ. ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆ 37 ಸಾವಿರದ ಎಂಟುನೂರ ಐವತ್ತೆರಡು ಕೋಟಿಗೂ ಹೆಚ್ಚಾಗಿದ್ದು, ಸುಮಾರು 17 ಲಕ್ಷ 85 ಸಾವಿರ ರೈತರು ಇದರ ಪ್ರಯೋಜನ ಪಡೆದಿದ್ದಾರೆ. ಖಾರಿಫ್ ಬೆಳೆ 755 ಲಕ್ಷ ಮೆಟ್ರಿಕ್ ಟನ್ ಮತ್ತು ರಬಿ ಬೆಳೆ 105 ಲಕ್ಷ ಮೆಟ್ರಿಕ್ ಟನ್ ಸೇರಿದಂತೆ 860 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು […]
ದೇಶದಲ್ಲಿ ಏರುತ್ತಿರುವ ಗೋಧಿ ಬೆಲೆ ತಗ್ಗಿಸಲು ರಫ್ತಿಗೆ ನಿಷೇಧ ಹೇರಿದ ಭಾರತ: ನಿರ್ಧಾರದಿಂದ ಯೂರೋಪಿನಲ್ಲಿ ತಳಮಳ!

ದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಗೋಧಿ ಮತ್ತು ಅದರ ಉತ್ಪನ್ನಗಳ ಬೆಲೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ತತ್ಕಾಲದಿಂದಲೇ ಜಾರಿಗೆ ಬರುವಂತೆ ಗೋದಿಯ ರಫ್ತನ್ನು ನಿಷೇಧಿಸಿ ಭಾರತ ಸರಕಾರದ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಆದೇಶ ಹೊರಡಿಸಿದ್ದಾರೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ದ, ಹಾಗೂ ಏರುತ್ತಿರುವ ತಾಪಮಾನದಿಂದಾಗಿ ವಿದೇಶೀ ಮಾರುಕಟ್ಟೆಗಳಲ್ಲಿ ಗೋಧಿಯ ಆವಕ ಕಡಿಮೆಯಾಗುತ್ತಿದ್ದು, ಯೂರೋಪ್, ಅಮೇರಿಕಾ ಮತ್ತಿತರ ದೇಶಗಳಿಗೆ ಗೋಧಿಯನ್ನು ರಫ್ತು ಮಾಡುವ ಉದ್ದೇಶದಲ್ಲಿದ್ದ ಭಾರತವು ಇದೀಗ ರಫ್ತಿನ ಮೇಲೆ ನಿಷೇಧ ಹೇರಿರುವುದು ಯೂರೋಪ್ ಮುಂತಾದ ದೇಶಗಳಲ್ಲಿ ತಳಮಳವನ್ನು […]