ಹೊಸ ನಿಯಮದ ಬಗ್ಗೆ ಉಂಟಾಗಿದ್ದ ಗೊಂದಲಕ್ಕೆ ತೆರೆಎಳೆದ ವಾಟ್ಸಾಪ್

ನವದೆಹಲಿ: ವಾಟ್ಸಾಪ್‌ ಕಂಪೆನಿ ತನ್ನ ಹೊಸ ನಿಯಮಗಳ ಬಗ್ಗೆ ಕೊನೆಗೂ ಮೌನ ಮುರಿದಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದೆ. ನಿಮ್ಮ ಯಾವುದೇ ಖಾಸಗಿ ಮಾಹಿತಿಗಳನ್ನು ನಾವು ಫೇಸ್ಬುಕ್‌ ಜೊತೆ ಹಂಚಿಕೊಳ್ಳುವುದಿಲ್ಲ. ನೀವು ಕಳಿಸಿರುವ ಖಾಸಗಿ ಮೆಸೇಜ್‌ ಗಳನ್ನು ವೀಕ್ಷಿಸಲು ಯಾರಿಗೂ ಸಾಧ್ಯವಿಲ್ಲ ಎಂದು ವಾಟ್ಸಾಪ್‌ ಇಂದು ಬೆಳಿಗ್ಗೆ ತನ್ನ ಟ್ವಿಟರ್‌ ಖಾತೆಯಲ್ಲಿ ಸ್ಪಷ್ಟೀಕರಣ ನೀಡಿದೆ. ಕಂಪೆಯು ಈ ಮೊದಲು ತನ್ನ ನೂತನ ಗೌಪ್ಯತಾ ನಿಯಮಗಳನ್ನು ಬಳಕೆದಾರರು ಒಪ್ಪದಿದ್ದಲ್ಲಿ ಫೆಬ್ರವರಿಯಿಂದ ಅವರ ಖಾತೆಗಳನ್ನು ಬ್ಲಾಕ್‌ ಮಾಡಲಾಗುತ್ತದೆ ಎಂದು ಹೇಳಿತ್ತು. […]