ಮೀನುಗಾರರ ಬಲೆಗೆ ಬಿದ್ದ ಅಪರೂಪದ ಸಮುದ್ರ ಜೀವಿ ‘ವೇಲ್ ಶಾರ್ಕ್’

ಮಂಗಳೂರು: ಆಳ ಸಮುದ್ರ ಮೀನುಗಾರರ ಬಲೆಗೆ ಅಪರೂಪದ ಸಮುದ್ರ ಜೀವಿ ಎನ್ನಲಾದ ‘ವೇಲ್ ಶಾರ್ಕ್’ ಮೀನು ಬಿದ್ದಿದೆ. ಮೀನುಗಾರಿಕೆಗೆ ತೆರಳಿದ್ದ ಸಾಗರ್ ಹೆಸರಿನ ಟ್ರಾಲ್ ಬೋಟ್ ಬಲೆಗೆ ಆಹಾರ ಅರಸಿ ಬಂದ ‘ವೇಲ್ ಶಾರ್ಕ್’ ಮೀನು ಸಿಕ್ಕಿದ್ದು, ಈ ಮೀನು ಸುಮಾರು 1,400 ಕೆಜಿ ತೂಕವಿದೆ‌. ಅರಬ್ಬಿ ಸಮುದ್ರದಲ್ಲಿ ಅತಿ ಅಪರೂಪಕ್ಕೆ ಕಾಣ ಸಿಗುವ ವೇಲ್ ಶಾರ್ಕ್, ಸದ್ಯ ಅಳಿವಿನಂಚಿನಲ್ಲಿದೆ. ಸಣ್ಣಪುಟ್ಟ ಮೀನು ಹಿಡಿಯಲು ಹಾಕಿದ್ದ ಬಲೆಗೆ ಇಷ್ಟೊಂದು ದೊಡ್ಡ ಪ್ರಮಾಣದ ಮೀನು ಬಿದ್ದಿರುವುದು ಮೀನುಗಾರರ ಅಚ್ಚರಿಗೂ […]