ಬಲೆಗೆ ಬಿದ್ದ ಬೃಹತ್ ‘ತಿಮಿಂಗಿಲ ಸೊರಾ’ ಮೀನು

ಉತ್ತರ ಕನ್ನಡ: ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ತಡದಿ ಬಂದರಿನಲ್ಲಿ ಅಪರೂಪವಾಗಿ ಕಂಡುಬರುವ ಪ್ರಬೇಧದ ಬೃಹತ್ ತಿಮಿಂಗಿಲ ಸೊರ (Whale Shark) ಮೀನುಗಾರರ ಬಲೆಗೆ ಬಿದ್ದಿದೆ. ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ತದಡಿ ಭಾಗದ ಮೀನುಗಾರರಿಗೆ ಸಿಕ್ಕಿದ್ದ ತಿಮಿಂಗಿಲ ಸೊರ 300 ಕೆಜಿಗೂ ಹೆಚ್ಚು ತೂಕ ಹಾಗೂ 9 ಅಡಿಗೂ ಹೆಚ್ಚು ಉದ್ದವಿತ್ತು. ಸಾಧಾರಣವಾಗಿ ಗುಜರಾತ್​ ಭಾಗದಲ್ಲಿ ಹೆಚ್ಚಾಗಿ ಕಾಣಸಿಗುವ ಇವು ಅರಬ್ಬೀ ಸಮುದ್ರದುದ್ದಕ್ಕೂ ಅಲ್ಲಲ್ಲಿ ಸಿಗುತ್ತವೆ. ಆದರೆ, ಈ ಮೀನುಗಳು ಇತ್ತೀಚೆಗೆ ಬಹಳ ಅಪರೂಪವಾಗಿರುವ ಕಾರಣ […]