ವಾರಾಂತ್ಯ ಕರ್ಫ್ಯೂ; ಅಸಹಾಯಕರಿಗೆ ಊಟ ವಿತರಣೆ

ಉಡುಪಿ: ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಊಟ ಸಿಗದೆ ಹಸಿವಿನಿಂದ ಬಳಲುತ್ತಿದ್ದ ತೀರಾ ಅಸಹಾಯಕರಿಗೆ, ಅನಾರೋಗ್ಯ ಪೀಡಿತರಿಗೆ, ವೃದ್ದರು ಅಂಗವಿಕಲರು ಹಾಗೂ ಮಾನಸಿಕ ಅಸ್ವಸ್ಥರಿಗೆ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು 100 ಊಟವನ್ನು ವಿತರಿಸಿ ಹಸಿದವರ ಹಸಿವು ನೀಗಿಸಿದರು. ಆದಿಉಡುಪಿ, ಪಂದುಬೆಟ್ಟು, ಕರಾವಳಿ ಬೈಪಾಸ್, ಶಿರಿಬೀಡು, ರಥಬೀದಿ, ರಾಜಾಂಗಣ ವಾಹನ ನಿಲುಗಡೆ ಸ್ಥಳ, ಕಿನ್ನಿಮುಲ್ಕಿ, ಬಲಾಯಿಪಾದೆ, ರೈಲ್ವೆ ನಿಲ್ದಾಣ ಹಾಗೂ ನಗರದ ಮುಖ್ಯ ನಾಲ್ಕು ಬಸ್ ನಿಲ್ದಾಣಗಳಲ್ಲಿ ಆಶ್ರಯ ಪಡೆದಿದ್ದ ಅಸಹಾಯಕರಿಗೆ ವಿಶು ಶೆಟ್ಟಿ ಆಹಾರ ವಿತರಣೆ […]