ಸ್ಯಾಮ್‌ಸಂಗ್ ವಾಚ್ಗಳು ನೀಡಲಿವೆ ನಿಮ್ಮ ಹೃದಯ ಬಡಿತದ ಮಾಹಿತಿ .. ಶೀಘ್ರವೇ ಮಾರುಕಟ್ಟೆಯಲ್ಲಿ ಲಭ್ಯ

ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): ಸ್ಯಾಮ್‌ಸಂಗ್ ಹೆಲ್ತ್ ಮಾನಿಟರ್ ಅಪ್ಲಿಕೇಶನ್‌ನಲ್ಲಿನ ‘ಅನಿಯಮಿತ ಹಾರ್ಟ್ ರಿದಮ್ ನೋಟಿಫಿಕೇಶನ್’ IHRN ವೈಶಿಷ್ಟ್ಯವು ಈ ವರ್ಷದ ಬೇಸಿಗೆಯಲ್ಲಿ ಆದಷ್ಟು ಶೀಘ್ರ 13 ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ ಎಂದು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಪ್ರಕಟಿಸಿದೆ. ಹೃದಯದ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ವಾಚ್ಗಳನ್ನು ಸ್ಯಾಮ್‌ಸಂಗ್ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಶೀಘ್ರದಲ್ಲೇ ಈ ವಾಚ್ಗಳು ವಿವಿಧ 13 ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ. ಏನಿದು IHRN ವೈಶಿಷ್ಟ್ಯ?: ಐಎಚ್ಆರ್ಎನ್ ಅಪ್ಲಿಕೇಶನ್‌ನ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ECG) ಮಾನಿಟರಿಂಗ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಗ್ಯಾಲಕ್ಸಿ ವಾಚ್ ಬಳಕೆದಾರರಿಗೆ ಹೃತ್ಕರ್ಣದ […]