ಉಡುಪಿ ನಗರಸಭೆಯ ತ್ಯಾಜ್ಯ ಸಾಗಾಟದ ವಾಹನ ಪಲ್ಟಿ; ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರು

ಮಣಿಪಾಲ: ತ್ಯಾಜ್ಯ ತುಂಬಿಸಿಕೊಂಡು ಸಾಗುತ್ತಿದ್ದ ನಗರಸಭೆಯ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಉರುಳಿಬಿದ್ದ ಘಟನೆ ಅಲೆವೂರು ಪ್ರಗತಿನಗರದ ಡಂಪಿಂಗ್ ಯಾರ್ಡ್ ರಸ್ತೆಯಲ್ಲಿ ಇಂದು ಮಧ್ಯಾಹ್ನ ವೇಳೆ ಸಂಭವಿಸಿದೆ. ಅದೃಷ್ಟವಶಾತ್ ವಾಹನದ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ಈ ತ್ಯಾಜ್ಯ ಸಂಗ್ರಹ ವಾಹನವು ಅಲೆವೂರು ಪ್ರಗತಿನಗರದ ಡಂಪಿಂಗ್ ಯಾರ್ಡ್ ನಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಹೋಗುತ್ತಿದ್ದು, ಈ ವೇಳೆ ಪ್ರಗತಿನಗರದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಪಲ್ಟಿಯಾಗಿ ಬಿದ್ದಿದೆ ಎನ್ನಲಾಗಿದೆ. […]