2 ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ; ಯಾರನ್ನೂ ಸಿಎಂ ಸ್ಥಾನಕ್ಕೆ ಶಿಫಾರಸು ಮಾಡಲ್ಲ: ಬಿಎಸ್ ವೈ

ಬೆಂಗಳೂರು: ಹೈಕಮಾಂಡ್ ಹೇಳುವವರೆಗೂ ಸಿಎಂ ಸ್ಥಾನದಲ್ಲಿರುತ್ತೇನೆ. ಹೈಕಮಾಂಡ್‌ ಬೇಡವೆಂದಾಗ ರಾಜೀನಾಮೆ ನೀಡುತ್ತೇನೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಸಂಘಟಿಸುತ್ತೇನೆ. ಆದರೆ ಮುಂದೆ ಯಾರನ್ನು ಸಿಎಂ ಮಾಡಬೇಕೆಂದು ಸಲಹೆ ನೀಡಲ್ಲ; ಯಾರ ಹೆಸರನ್ನೂ ಸಿಎಂ ಸ್ಥಾನಕ್ಕೆ ಶಿಫಾರಸು ಮಾಡುವುದಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸಚಿವ ಸಂಪುಟ ಸಭೆಗೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹೈಕಮಾಂಡ್‌ನಿಂದ ನನಗೆ ಇನ್ನೂ ಅಧಿಕೃತ ಸೂಚನೆ ಬಂದಿಲ್ಲ. 25ರ ಬಳಿಕ ಬರುವ ಸಂದೇಶಕ್ಕಾಗಿ ನಾನು ಕಾಯುತ್ತಿದ್ದೇನೆ. 2 ತಿಂಗಳ ಹಿಂದೆಯೇ […]