ಕೆ.ಎಸ್.ಆರ್.ಟಿ.ಸಿಯ ಹೊಸ ಮಾದರಿ ಬಸ್ ಗಳಿಗೆ ಬ್ರ್ಯಾಂಡ್ ನೇಮ್ ಮತ್ತು ಗ್ರಾಫಿಕ್ ನೀಡಿ ನಗದು ಬಹುಮಾನ ಗೆಲ್ಲಿ

ಬೆಂಗಳೂರು: ಕೆ.ಎಸ್.ಆರ್.ಟಿ.ಸಿ ಯು ತನ್ನ ಪ್ರಯಾಣಿಕರಿಗೆ ಅತ್ಯುನ್ನತ ಶ್ರೇಣಿಯ ಪ್ರವಾಸದ ಅನುಭವವನ್ನು ನೀಡಲು ನೂತನ ಶ್ರೇಣಿಯ ವಾಹನ ಸೇವೆಯನ್ನು ಪರಿಚಯಿಸುತ್ತಿದ್ದು, ಸಂಸ್ಥೆಯ ಬಿಎಸ್ ವಿಐ- 9600 ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ ಮತ್ತು ಒಲೆಕ್ಟ್ರಾ ಎಲೆಕ್ಟ್ರಿಕ್ ಬಸ್ ಗಳಿಗೆ ಸಾರ್ವಜನಿಕರಿಂದ ಬ್ರ್ಯಾಂಡ್ ನೇಮ್, ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ ವಿನ್ಯಾಸವನು ನಿರೀಕ್ಷಿಸುತ್ತಿದೆ. ಉತ್ತಮ ಟ್ಯಾಗ್ ಲೈನ್ ನೊಂದಿಗೆ ಬ್ರ್ಯಾಂಡ್ ಹೆಸರನ್ನು ಸೂಚಿಸಿದವರಿಗೆ ಪ್ರತಿ ಮಾದರಿ ಬಸ್ಸಿಗೆ 10,000 ರೂ ನಗದು ಬಹುಮಾನ ಹಾಗೂ ಉತ್ತಮ ಗ್ರಾಫಿಕ್ಸ್ […]
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ: ಮಂಗಳೂರು-ಹೊಸದುರ್ಗ ಮಾರ್ಗ ವೋಲ್ವೋ ಬಸ್ ಕಾರ್ಯಾಚರಣೆ

ಉಡುಪಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮಂಗಳೂರು ವಿಭಾಗದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು-ಹೊಸದುರ್ಗ ಮಾರ್ಗದಲ್ಲಿ ಪ್ರತಿಷ್ಠಿತ ವೋಲ್ವೋ ಸಾರಿಗೆಯನ್ನು ಈಗಾಗಲೇ ಪ್ರಾರಂಭಿಸಲಾಗಿರುತ್ತದೆ. ಸಾರಿಗೆಯು ಮಂಗಳೂರಿನಿಂದ ರಾತ್ರಿ 9.30 ಕ್ಕೆ ಹೊರಟು ಸುರತ್ಕಲ್-ಪಡುಬಿದ್ರೆ-ಉಡುಪಿ-ಮಣಿಪಾಲ-ಕುಂದಾಪುರ-ಅಂಪಾರು- ಸಿದ್ದಾಪುರ-ಮಾಸ್ತಿಕಟ್ಟೆ-ತೀರ್ಥಹಳ್ಳಿ-ಶಿವಮೊಗ್ಗ-ಹೊಳೆಹೊನ್ನೂರು – ಚೆನ್ನಗಿರಿ-ಹೊಳಲ್ಕೆರೆ ಮಾರ್ಗವಾಗಿ ಹೊಸದುರ್ಗಕ್ಕೆ ಬೆಳಗ್ಗೆ 5.45 ಕ್ಕೆ ಹಾಗೂ ಮರುಪ್ರಯಾಣದಲ್ಲಿ ಹೊಸದುರ್ಗದಿಂದ ರಾತ್ರಿ 10 ಗಂಟೆಗೆ ಹೊರಟು ಬೆಳಗ್ಗೆ 6.15 ಕ್ಕೆ ಮಂಗಳೂರನ್ನು ತಲಪುತ್ತದೆ. ಸದರಿ ಸಾರಿಗೆಯಲ್ಲಿ ಮಂಗಳೂರಿನಿಂದ ಹೊಸದುರ್ಗಕ್ಕೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣದರ 700 […]